Haryana Election | ಕುಸ್ತಿ ಅಖಾಡದಲ್ಲಿ ಸೋತರೂ, ಚುನಾವಣಾ ಕಣದಲ್ಲಿ ಗೆದ್ದು ಬೀಗಿದ ವಿನೇಶ್

Untitled-design-2024-10-08T140216.889
Published on

ಚಂಡೀಗಢ: ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರು ರಾಜಕೀಯಕ್ಕೆ ಪ್ರವೇಶಿಸಿರುವ ವಿಚಾರ ಗೊತ್ತೆ ಇದೆ. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ(Haryana Election) ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜಿಂದ್​ ಜಿಲ್ಲೆಯ ಜುಲಾನಾ ಕ್ಷೇತ್ರದಿಂದ ವಿನೇಶ್ ಫೋಗಟ್ ಜಯ ಸಾಧಿಸಿದ್ದಾರೆ. ವಿನೇಶ್​​ ಅವರ ಸಹ ಕುಸ್ತಿಪಟು ಬಜರಂಗ್ ಪುನಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಮಾಡುವ ಮೂಲಕ ವಿನೇಶ್ ಪೋಗಟ್​​ ಚುನಾವಣಾ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ ಎಂದು ತಿಳಿಸಿದ್ದಾರೆ.

ಆದರೆ, ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್​​​ನಿಂದ ಇನ್ನು ಅಧಿಕೃತ ಮಾಹಿತಿ ಹೊರಬಂದಿಲ್ಲ. ಬಿಜೆಪಿಯಿಂದ ಸ್ಪರ್ಧಿಸಿರುವ ಯೋಗೇಶ್ ಅವರಿಗಿಂತ 5000ಕ್ಕೂ ಹೆಚ್ಚು ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ ಎನ್ನಲಾಗಿದೆ. ಆಮ್ ಆದ್ಮಿ ಪಕ್ಷದ ಪರವಾಗಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕವಿತಾ ರಾಣಿ ಅವರು WWE ಕುಸ್ತಿಪಟು ಎಂದು ಮೂಲಗಳು ತಿಳಿಸಿವೆ.

ವಿನೇಶ್​ ಫೋಗಟ್​​​​ ಅವರ ಗೆಲುವಿಗೆ ಬಜರಂಗ್ ಪುನಿಯಾ ಅಭಿನಂದನೆ ಸಲ್ಲಿಸಿದ್ದಾರೆ. ದೇಶದ ಪುತ್ರಿ ವಿನೇಶ್ ಫೋಗಟ್ ಅವರ ಗೆಲುವಿಗಾಗಿ ಅಭಿನಂದನೆಗಳು. ಈ ಹೋರಾಟ ಕೇವಲ ಒಂದು ಜೂಲಾನಾ ಸ್ಥಾನಕ್ಕಾಗಿ ಅಲ್ಲ, ಕೇವಲ 3-4 ಅಭ್ಯರ್ಥಿಗಳೊಂದಿಗೆ ಅಲ್ಲ, ಕೇವಲ ಪಕ್ಷಗಳ ಹೋರಾಟವಲ್ಲ. ಈ ಹೋರಾಟ ಇದು ಪ್ರಬಲ ದಬ್ಬಾಳಿಕೆಯ ಶಕ್ತಿಗಳ ವಿರುದ್ಧವಾಗಿತ್ತು ಮತ್ತು ವಿನೇಶ್ ವಿಜೇತರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಕುಸ್ತಿಪಟು ವಿನೇಶ್ ಫೋಗಟ್ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 50 ಕೆಜಿ ತೂಕ ವಿಭಾಗದಲ್ಲಿ ಭಾಗವಹಿಸಿದ್ದರು. ಅವರು ಅದ್ಭುತ ಪ್ರದರ್ಶನ ನೀಡಿ ಫೈನಲ್ಸ್‌ನಲ್ಲಿ ಸ್ಥಾನ ಪಡೆದರು, ಆದರೆ ಅಂತಿಮ ಪಂದ್ಯದ ಆರಂಭಕ್ಕೂ ಮುನ್ನ ವಿನೇಶ್ ಅವರ ತೂಕ ಸುಮಾರು 100 ಗ್ರಾಂಗಳಷ್ಟು ಹೆಚ್ಚಾಗಿದೆ. ಇದರಿಂದಾಗಿ ಅವರು ಅನರ್ಹಗೊಂಡರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net