ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರಾಗಿ ಕುಲಕರ್ಣಿ

Venkatesh Kulkarni Humnabad - Copy
????????????
Published on

ಬೀದರ್: ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾಗಿ ವೆಂಕಟೇಶ್ ಕುಲಕರ್ಣಿ ಹುಮನಾಬಾದ್ ಅವರನ್ನು ನೇಮಕ ಮಾಡಲಾಗಿದೆ.

ಒಂದು ವರ್ಷದ ಅವಧಿಗೆ (2025-2026) ಅಥವಾ ಮುಂದಿನ ಆದೇಶದ ವರೆಗೆ ಈ ನೇಮಕ ಮಾಡಿ ಮಹಾಸಭಾದ ರಾಜ್ಯ ಅಧ್ಯಕ್ಷ ಎಸ್. ರಘುನಾಥ್ ಆದೇಶ ಹೊರಡಿಸಿದ್ದಾರೆ.

ವೆಂಕಟೇಶ್ ಕುಲಕರ್ಣಿ ಹುಮನಾಬಾದ್ ಅವರು ಈಚೆಗೆ ನಡೆದ ಕರ್ನಾಟಕ ಬ್ರ್ರಾಹ್ಮಣ ಮಹಾಸಭಾದ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಆಯ್ಕೆಯಾಗಿದ್ದರು. ಅವರ ಕ್ರಿಯಾಶೀಲತೆ ಹಾಗೂ ಸಂಘಟನಾ ಕೌಶಲಕ್ಕೆ ಅಲ್ಪ ಅವಧಿಯಲ್ಲೇ ರಾಜ್ಯ ಉಪಾಧ್ಯಕ್ಷ ಹುದ್ದೆ ಒಲಿದು ಬಂದಿದೆ.

ವೆಂಕಟೇಶ್ ಕುಲಕರ್ಣಿ ಹುಮನಾಬಾದ್ ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಕ್ಕೆ ಜಿಲ್ಲೆಯ ಬ್ರಾಹ್ಮಣ ಸಮಾಜದವರು ಸಂತಸ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net