ಬಿಡಿಎ ಹಗರಣ ಸಿಬಿಐಗೆ ವಹಿಸಿ

Satish Noubade
Published on

ಬೀದರ್: ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ)ದಲ್ಲಿ ನಡೆದ ಹಗರಣದ ತನಿಖೆ ಸಿಬಿಐಗೆ ವಹಿಸಬೇಕು ಎಂದು ಕ್ರೀಡಾ ಸಂಸ್ಥೆ ನಿರ್ದೇಶಕ ಸತೀಶ ನೌಬಾದೆ ಆಗ್ರಹಿಸಿದ್ದಾರೆ.

ಚಿಕ್ಕಪೇಟ್ ಬಳಿಯ ಸರ್ವೇ ನಂ.26ರಲ್ಲಿ ಲೇಔಟ್ ನಿರ್ಮಿಸಿದ್ದು, ಶೇ.100 ವಿನ್ಯಾಸ ಬಿಡುಗಡೆ ಮಾಡುವಂತೆ ಹಲವು ಬಾರಿ ಕಚೇರಿಗೆ ಹೋಗಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಒಂದು ಕೋಟಿ ರೂ. ಲಂಚ ಕೇಳಲಾಗಿದೆ. ಇಷ್ಟೊಂದು ಹಣ ನನ್ನ ಹತ್ತಿರವಿಲ್ಲ. ಈ ಲೇಔಟ್ ನಿಂದ ಇಷ್ಟು ಲಾಭ ಗಳಿಸಲು ಆಗಲ್ಲ ಎಂದು ಹೇಳಿದ್ದರೂ 50 ಲಕ್ಷ ರೂ. ಕೊಡಿ ಎಂದು ಅಕಾರಿ ಕೇಳಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು.

ಕೆಲ ನಿವೇಶನ ಮಾರಾಟ ಮಾಡಿರುವೆ. ನಿವೇಶನ ಪಡೆದವರನ್ನು ಕಚೇರಿಗೆ ಕರೆಸಿ ನೌಬಾದೆ ಲೇಔಟ್ ಅಕ್ರಮವಾಗಿದ್ದು, ಅವರಿಂದ ಹಣ ವಸೂಲಿ ಮಾಡಿ ಎಂದು ಅಕಾರಿಗಳು ಹೇಳಿದ್ದರಿಂದ ಮಾನಸಿಕವಾಗಿ ನೊಂದು ಹಾಗೂ ಆಪ್ತರ ಜತೆ ಸಮಾಲೋಚನೆ ಮಾಡಿದ ನಂತರ ಲೋಕಾಯುಕ್ತರಿಗೆ ದೂರು ಕೊಟ್ಟಿರುತ್ತೇನೆ. ಪ್ರಕರಣವನ್ನು ಗಂಭೀರ ಪರಿಗಣಿಸಿ ಬಿಡಿಎ ಹಗರಣದ ಸಿಬಿಐ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು. ರಾಮಕೃಷ್ಣನ್ ಸಾಳೆ, ಸತೀಶ್ ಕುಲಕರ್ಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net