ಹಾಸನ ಜಿಲ್ಲೆಗೂ ಕಂಟಕವಾದ ಮುಂಬೈ ನಂಟು!

corona virus
Published on

ಹಾಸನ: ಇಡೀ ರಾಜ್ಯದಲ್ಲಿ ಇಂದು ಹೊಸದಾಗಿ 63 ಜನರಿಗೆ ಕರೊನಾ ಪಾಸಿಟಿವ್ ಇರುವುದು ವರದಿಯಾಗಿದ್ದು, ಅದರಲ್ಲಿ 21 ಪಾಸಿಟಿವ್ ಪ್ರಕರಣಗಳು ಹಾಸನ ಜಿಲ್ಲೆಯವೇ ಆಗಿರುವುದು ಆ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

ಇದುವರೆಗೆ ಮಂಡ್ಯ ಜಿಲ್ಲೆಗೆ ಬಂದ ಮುಂಬೈ ವಾಸಿಗಳಿಂದ ಆ ಜಿಲ್ಲೆ ಆತಂಕ ಎದುರಿಸುತ್ತಿತ್ತು. ಈಗ ಆ ಸಾಲಿಗೆ ಹಾಸನ ಜಿಲ್ಲೆಯೂ ಸೇರಿಕೊಂಡಂತಾಗಿದೆ.

ಹಾಸನ ಜಿಲ್ಲೆಯಲ್ಲಿ ಇಂದು ವರದಿಯಾದ 21 ಪಾಸಿಟಿವ್ ಪ್ರಕರಣಗಳಿಂದಾಗಿ ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳು 54ಕ್ಕೇರಿದಂತಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದ್ದಾರೆ.

ಸೋಂಕಿತರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಮೇ 12ರಿಂದ ಕರೊನಾ ಪ್ರಕರಣಗಳು ವರದಿಯಾಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net