ವಿವಿಧ ಚರ್ಚ್‌ಗಳಲ್ಲಿ ಕ್ರಿಸ್ತನ ಆರಾಧನೆ

29-kglphoto-3,
ಕೊಳ್ಳೇಗಾಲ ಪಟ್ಟಣದ ಬೇತಲ್ ಲೂಥರನ್ ಚರ್ಚ್ ನಲ್ಲಿ ಗುಡ್ ಫ್ರೈಡೇ ಹಿನ್ನೆಲೆ ಕ್ರೈಸ್ತರು ಯೇಸು ಸ್ವಾಮಿಯ ಪ್ರಾರ್ಥನೆಯಲ್ಲಿ ತೊಡಗಿರುವುದು.
Published on

ಕೊಳ್ಳೇಗಾಲ : ಗುಡ್ ಫ್ರೈಡೇ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧ ಚರ್ಚ್‌ಗಳಲ್ಲಿ ಶುಕ್ರವಾರ ವಿಶೇಷವಾಗಿ ಕ್ರೈಸ್ತರು ಯೇಸು ಕ್ರಿಸ್ತಗೆ ಪ್ರಾರ್ಥನೆಯನ್ನು ಸಲ್ಲಿಸಿದರು.
ಪಟ್ಟಣದ ಬೇತೆಲ್ ಲೂಥರನ್ ಚರ್ಚ್, ಬ್ರದರನ್ ಚರ್ಚ್, ಎಸ್.ಡಿ.ಎ ಚರ್ಚ್, ಅರುಣೋದಯ ಚರ್ಚ್, ಅಸ್ಸಿಸಿ ಚರ್ಚ್ ಸೇರಿದಂತೆ ಇನ್ನಿತರ ಚರ್ಚ್‌ಗಳಲ್ಲಿ ಕ್ರಿಸ್ತನ ಆರಾಧನೆ ನಡೆಯಿತು. ಕ್ರೈಸ್ತರು ಗುಡ್ ಫ್ರೈಡೇ ದಿನದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತ ಆಗುವವರೆಗೆ ಯಾವುದೇ ಆಹಾರ ಸೇವಿಸದೆ ಉಪವಾಸ ಆಚರಣೆ ಮಾಡಿದರು. ಈ ದಿನ ಯೇಸು ಸ್ವಾಮಿ ಶಿಲುಬೆಗೇರಿಸಿದ ದಿನವಾದ ಹಿನ್ನೆಲೆಯಲ್ಲಿ ಕ್ರೈಸ್ತರು ಯೇಸು ಕ್ರಿಸ್ತನ ಸ್ಮರಣೆಯನ್ನು ಮಾಡಿದರು. ಪಟ್ಟಣದ ಬೇತಲ್ ಲೂಥರನ್ ಚರ್ಚ್‌ನಲ್ಲಿ ಗುಡ್ ಫ್ರೈಡೇ ಮಹತ್ವದ ಬಗ್ಗೆ ಚರ್ಚ್ ಗುರುಗಳಾದ ಲೂಥರನ್ ಚರ್ಚ್ ಫಾಸ್ಟರ್ ರೆ. ಜೋಶುವಾ ಪ್ರಸನ್ನಕುಮಾರ್ ಸಭಿಕರಿಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net