ವಿಶ್ವದ ಪವರ್​ಫುಲ್​ ಪಾಸ್​ಪೋರ್ಟ್​ ಪಟ್ಟಿ ಪ್ರಕಟ: ಅಗ್ರ 10ರಿಂದ ಹೊರಬಿದ್ದ ಅಮೆರಿಕ! ಭಾರತಕ್ಕೆ ಯಾವ ಸ್ಥಾನ? | Passport

ವಿಜಯವಾಣಿ (60)
Published on

ನವದೆಹಲಿ: ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳು (Passport) ಯಾವುದು? ಈ ಪಟ್ಟಿಯಲ್ಲಿ ಯಾವ ದೇಶಗಳು ಟಾಪ್​ 10ರಲ್ಲಿ ಸ್ಥಾನ ಪಡೆದಿವೆ? ಭಾರತ ಯಾವ ಸ್ಥಾನದಿಂದ ಕೆಳಗಿಳಿದಿದೆ ಎಂಬುದರ ಸಂಪೂರ್ಣ ವಿವರ ಇದೀಗ ಅಕ್ಟೋಬರ್​ನಲ್ಲಿ ಬಿಡುಗಡೆಗೊಂಡಿರುವ ಇಂಡೆಕ್ಸ್​ನಲ್ಲಿ ರಿವೀಲ್​ ಆಗಿದೆ. ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರವಾಗಿ ಹೊರಹೊಮ್ಮಿರುವ ಭಾರತದ ಪಾಸ್‌ಪೋರ್ಟ್, ವಿಶ್ವದ ಅಗ್ರ 50 ಬಲಿಷ್ಠ ಪಾಸ್‌ಪೋರ್ಟ್‌ಗಳಲ್ಲಿ ಸ್ಥಾನ ಪಡೆದಿಲ್ಲ.

ವಾಸ್ತವವಾಗಿ, ಅಕ್ಟೋಬರ್‌ನಲ್ಲಿ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ ಶ್ರೇಯಾಂಕಗಳು ಬಿಡುಗಡೆಗೊಳಿಸಿರುವ ಇಂಡೆಕ್ಸ್​ ಪ್ರಕಾರ, ಭಾರತದ ಪಾಸ್‌ಪೋರ್ಟ್ 85ನೇ ಸ್ಥಾನಕ್ಕೆ ತಲುಪಿದೆ. ಆಯಾ ದೇಶಗಳ ಪ್ರಮಾಣಿತ ಪಾಸ್‌ಪೋರ್ಟ್‌ಗಳು ನಾಗರಿಕರಿಗೆ ಒದಗಿಸುವ ಪ್ರಯಾಣ ಸ್ವಾತಂತ್ರ್ಯದ ಆಧಾರದ ಮೇಲೆ ಈ ಶ್ರೇಣಿಯನ್ನು ನಿರ್ಧರಿಸಲಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ.

85ಕ್ಕೆ ಕುಸಿದ ಭಾರತ

ಈ ವರ್ಷದ ಆರಂಭದಲ್ಲಿ, ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ ಶ್ರೇಯಾಂಕದಲ್ಲಿ ಇಂಡಿಯನ್​ ಪಾಸ್‌ಪೋರ್ಟ್ 77ನೇ ಸ್ಥಾನಕ್ಕೆ ಏರಿತ್ತು. ಆದರೆ, ಈಗ 85ನೇ ಸ್ಥಾನಕ್ಕೆ ಕುಸಿದಿದೆ. ವೀಸಾ ಅಗತ್ಯವಿಲ್ಲದೇ 57 ದೇಶಗಳಿಗೆ ಪ್ರಯಾಣಿಸಲು ಭಾರತೀಯ ಪಾಸ್‌ಪೋರ್ಟ್ ಅವಕಾಶ ನೀಡುತ್ತದೆ. ಆದರೆ, ಕಳೆದ ವರ್ಷ, ಈ ಪಾಸ್‌ಪೋರ್ಟ್‌ನೊಂದಿಗೆ ವೀಸಾ ಇಲ್ಲದೆಯೇ 62 ಸ್ಥಳಗಳಿಗೆ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿತ್ತು. ಆದರೀಗ, ಅದು ಬದಲಾಗಿದೆ.

How Many Types of Passport in India with Color and Use

ಈ ಬಾರಿಯ ರ್ಯಾಕಿಂಗ್ ಪ್ರಕಾರ, ಭಾರತ ಮತ್ತು ಮೌರಿಟೇನಿಯಾ ಜಂಟಿಯಾಗಿ 85ನೇ ಸ್ಥಾನವನ್ನು ಅಲಂಕರಿಸಿವೆ. ಅಂಗೋಲಾ, ಬಾರ್ಬಡೋಸ್, ಭೂತಾನ್, ಬೊಲಿವಿಯಾ, ಬ್ರಿಟಿಷ್ ವರ್ಜಿನ್ ದ್ವೀಪಗಳು, ಬುರುಂಡಿ, ಕಾಂಬೋಡಿಯಾ, ಇಂಡೋನೇಷ್ಯಾ, ಇರಾನ್, ಜಮೈಕಾ, ಕಝಾಕಿಸ್ತಾನ್, ಕೀನ್ಯಾ, ಮಲೇಷ್ಯಾ, ಮಾಲ್ಡೀವ್ಸ್, ಫಿಲಿಪೈನ್ಸ್, ಶ್ರೀಲಂಕಾ ಮತ್ತು ಥೈಲ್ಯಾಂಡ್ ಸೇರಿದಂತೆ ಹಲವು ರಾಷ್ಟ್ರಗಳು ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ವೀಸಾ ಅಗತ್ಯತೆ ಮುಂದಿಡದೆ, ತಮ್ಮ ದೇಶಕ್ಕೆ ಬರಲು ಅವಕಾಶ ನೀಡಿವೆ.

ಪ್ರಥಮ ಬಾರಿಗೆ ಅಮೆರಿಕ

ಇನ್ನು ಈ ಹಿಂದೆ ಟಾಪ್​ 10ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಅಮೆರಿಕ, ಇದೀಗ ಅಚ್ಚರಿ ಎಂಬಂತೆ ಹನ್ನೆರಡನೇ ಸ್ಥಾನಕ್ಕೆ ಜಿಗಿದಿದೆ. ಯುಎಸ್​ ಮತ್ತು ಮಲೇಷ್ಯಾ ಈ ಸ್ಥಾನವನ್ನು ಹಂಚಿಕೊಂಡಿದೆ. 180 ದೇಶಗಳಿಗೆ ವೀಸಾ ಮುಕ್ತ ಪ್ರಯಾಣವನ್ನು ಅನುಮತಿಸುವ ಅಮೆರಿಕವು, ಪ್ರಥಮ ಬಾರಿಗೆ ಅಗ್ರ 10 ರ್ಯಾಕಿಂಗ್​ನಿಂದ ಕೆಳಗಿಳಿದಿರುವುದರಿಂದ ಇದು ಐತಿಹಾಸಿಕ ಬದಲಾವಣೆಯನ್ನು ಸೂಚಿಸಿದೆ.

ಅಗ್ರ 3ರಲ್ಲಿ ಈ ದೇಶಗಳು!

ಇಂಡೆಕ್ಸ್​ನಲ್ಲಿ ಸಿಂಗಾಪುರ ಮೊದಲ ಸ್ಥಾನದಲ್ಲಿದೆ. ವಿಶೇಷ ಎಂದರೆ, ಈ ದೇಶದ ಪಾಸ್‌ಪೋರ್ಟ್ ವೀಸಾ ಇಲ್ಲದೆಯೇ 193 ರಾಷ್ಟ್ರಗಳಿಗೆ ಪ್ರವೇಶವನ್ನು ಅನುಮತಿಸುತ್ತದೆ. ದಕ್ಷಿಣ ಕೊರಿಯಾದ ಪಾಸ್‌ಪೋರ್ಟ್ ಹೊಂದಿರುವವರು 190 ದೇಶಗಳಿಗೆ ಭೇಟಿ ನೀಡಬಹುದು. ಈ ನಿಟ್ಟಿನಲ್ಲಿ ಸೌತ್ ಕೊರಿಯಾ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು, ಜಪಾನ್ ಮೂರನೇ ಸ್ಥಾನದಲ್ಲಿದೆ. ಈ ದೇಶ ಒಟ್ಟು 189 ರಾಷ್ಟ್ರಗಳಿಗೆ ಎಂಟ್ರಿಯನ್ನು ಅನುಮತಿಸುತ್ತದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net