1000 ಕೆಜಿ, 18 ಅಡಿ ಉದ್ದ... ಸೆರೆಯಲ್ಲಿದ್ದ ವಿಶ್ವದ ಅತಿದೊಡ್ಡ ಮೊಸಳೆ ಕ್ಯಾಸಿಯಸ್ ಇನ್ನಿಲ್ಲ, ಕಂಬನಿ ಮಿಡಿದ ಪ್ರಾಣಿ ಪ್ರಿಯರು | Biggest Crocodile

Biggest Crocodile
Published on

Biggest Crocodile : ಸೆರೆಯಲ್ಲಿದ್ದ ವಿಶ್ವದ ಅತಿದೊಡ್ಡ ಮೊಸಳೆ ಎಂಬ ಖ್ಯಾತಿ ಪಡೆದಿದ್ದ ಕ್ಯಾಸಿಯಸ್ ಮೊಸಳೆ ಕೊನೆಯುಸಿರೆಳೆದಿದೆ. ಆಸ್ಟ್ರೇಲಿಯಾದ ವನ್ಯಜೀವಿ ಅಭಯಾರಣ್ಯದಲ್ಲಿ ಮೃತಪಟ್ಟಿದ್ದು, ಪ್ರಾಣಿ ಪ್ರಿಯರು ಕಂಬನಿ ಮಿಡಿದಿದ್ದಾರೆ.

ಕ್ಯಾಸಿಯಸ್ ಉಪ್ಪು ನೀರಿನ ಮೊಸಳೆ. ಇದು ಗ್ರೇಟ್ ಬ್ಯಾರಿಯರ್ ರೀಫ್‌ನಲ್ಲಿರುವ ಗ್ರೀನ್ ಐಲ್ಯಾಂಡ್‌ನಲ್ಲಿ ವಾಸಿಸುತ್ತಿತ್ತು. 18 ಅಡಿ ಉದ್ದದ ಮೊಸಳೆಯು 110 ವರ್ಷಗಳಿಗಿಂತ ಹೆಚ್ಚು ಹಳೆಯದು ಎಂದು ನಂಬಲಾಗಿದೆ. 2011ರಲ್ಲಿ ಸೆರೆಯಲ್ಲಿದ್ದ ಅತಿದೊಡ್ಡ ಮೊಸಳೆ ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಇದಕ್ಕೆ ನೀಡಲಾಯಿತು.

ಮರಿನ್‌ಲ್ಯಾಂಡ್ ಮೆಲನೇಷಿಯಾ ಮೊಸಳೆ ಆವಾಸಸ್ಥಾನವು ಕ್ಯಾಸಿಯಸ್‌ ಸಾವಿನ ಸುದ್ದಿಯನ್ನು ಶನಿವಾರ (ನ.02) ಪ್ರಕಟಿಸಿತು. ನಮ್ಮ ಆತ್ಮೀಯ ಸ್ನೇಹಿತ ಕ್ಯಾಸಿಯಸ್ ನಿಧನದಿಂದ ನಾವು ತುಂಬಾ ದುಃಖಿತರಾಗಿದ್ದೇವೆ ಎಂದು ವಕ್ತಾರರು ತಿಳಿಸಿದ್ದಾರೆ. ಕ್ಯಾಸಿಯಸ್ ಕೇವಲ ಮೊಸಳೆಯಾಗಿರಲಿಲ್ಲ ಅವನು ನಮ್ಮ ಕು5ಟುಂಬದ ಪ್ರೀತಿಯ ಭಾಗವಾಗಿದ್ದನು. ತನ್ನ ಸ್ನೇಹಿತ ಜಾರ್ಜ್‌ಗೆ 37 ವರ್ಷಗಳಿಂದ 5ಸಂತೋಷ ಮತ್ತು ಸ್ನೇಹವನ್ನು ತಂದಿದ್ದನು. ಅಕ್ಟೋಬರ್ 15 ರಿಂದ ಕ್ಯಾಸಿಯಸ್ ಆ5ರೋಗ್ಯವು ಹದಗೆಟ್ಟಿತ್ತು ಎಂದು ಮರಿನ್‌ಲ್ಯಾಂಡ್ ಮೆಲನೇಷಿಯಾ ಮೊಸಳೆ ಆವಾಸಸ್ಥಾದ ವಕ್ತಾರರು ತಿಳಿಸಿದ್ದಾರೆ.

Biggest Crocodile

ಕ್ಯಾಸಿಯಸ್ ಮೊಸಳೆಯು 1,000 ಕೆಜಿಗಿಂತ ಹೆಚ್ಚು ತೂಕವಿತ್ತು. 1980ರ ದಶಕದಲ್ಲಿ ಸೆರೆಹಿಡಿಯಲಾಯಿತು. ಕ್ಯಾಸಿಯಸ್​ ಕಣ್ಣುಗಳು ತುಂಬಾ ದೊಡ್ಡದಾಗಿದ್ದವು. ಅಲ್ಲದೆ, ಇತರ ಮೊಸಳೆಗಳಿಗಿಂತ ಹೆಚ್ಚು ಸಂವೇದನಾಶೀಲವಾಗಿತ್ತು ಮತ್ತು ಬುದ್ಧಿವಂತಿಕೆ ಹೊಂದಿತ್ತು.ಈ ಮೊಸಳೆ 1903 ರಲ್ಲಿ ಹುಟ್ಟಿದೆ ಎಂದು ನಂಬಲಾಗಿದೆ. 1987 ರಲ್ಲಿ, ಆಸ್ಟ್ರೇಲಿಯಾದ ಉತ್ತರ ಪ್ರಾಂತ್ಯದ ಡಾರ್ವಿನ್‌ನ ದಕ್ಷಿಣಕ್ಕೆ ಫಿನ್ನಿಸ್ ನದಿಯಿಂದ ಟ್ರಕ್ ಮೂಲಕ ಮೃಗಾಲಯಕ್ಕೆ ತರಲಾಯಿತು. ಈ ವೇಳೆ ಮೊಸಳೆಯ ಮೂಗು ಮತ್ತು ಬಾಲ ತುಂಡಾಗಿತ್ತು. ಇತರ ಮೊಸಳೆಗಳೊಂದಿಗಿನ ಘರ್ಷಣೆಯಿಂದಾಗಿ ಈ ರೀತಿ ಆಗಿತ್ತು.

ದೇಹದ ಅಂಗಗಳು ತುಂಡಾಗಿದ್ದರು ಕ್ಯಾಸಿಯಸ್‌ನ ಉದ್ದವನ್ನು ಮೀರಿಸಲಾಗಲಿಲ್ಲ. ಆದರೆ, ಫಿಲಿಪ್ಪೀನ್ಸ್‌ನ ಲೊಲಾಂಗ್ ಎಂಬ ಮೊಸಳೆ ಕ್ಯಾಸಿಯಸ್ ಉದ್ದ ಮತ್ತು ತೂಕದ ದಾಖಲೆಯನ್ನು ಸರಿಗಟ್ಟಿತ್ತು. 2011ರಲ್ಲಿ ಲಾಂಗ್ ಮೊಸಳೆಯನ್ನು ಅಧಿಕಾರಿಗಳು 20 ಅಡಿ 3 ಇಂಚುಗಳಷ್ಟು ಉದ್ದ ಎಂದು ದಾಖಲಿಸಿದ್ದಾರೆ. ಆದಾಗ್ಯೂ, 2013 ರಲ್ಲಿ ಲಾಂಗ್ ಮೃತಪಟ್ಟ ಬಳಿಕ ಆ ದಾಖಲೆ ಕ್ಯಾಸಿಯಸ್ ಪಾಲಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net