ಪ್ರಪಂಚದ ಮೊದಲ ಬಾಹ್ಯಾಕಾಶ ಯಾತ್ರಿ ಹನುಮಾನ್ ಜಿ; ವಿದ್ಯಾರ್ಥಿಗಳಿಗೆ ಬಿಜೆಪಿ ಎಂಪಿ ಅನುರಾಗ್ ಠಾಕೂರ್ ಪಾಠ| Anurag Thakur

Anuragh Thakur
Published on

Anurag Thakur: ಅಂತರಿಕ್ಷೆಯಾನದ ಮೂಲದ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ ಮೊದಲ ಗಗನಯಾತ್ರಿ ಅಮೆರಿಕದ ನೀಲ್ ಆರ್ಮ್​ಸ್ಟ್ರಾಂಗ್ ಎಂಬುದು ಸಾರ್ವನಿಕವಾಗಿರುವ ಸತ್ಯ, ಆದರೆ ಶನಿವಾರ(ಆಗಸ್ಟ್​ 23) ಬಿಜೆಪಿ ಸಂಸದ ಅನುರಾಗ್ ವಿದ್ಯಾರ್ಥಿಗಳಿಗೆ ಮೊದಲ ಗಗನಯಾತ್ರಿ ಹನುಮಾನ್ ಜೀ ಎಂದು ಪಾಠ ಮಾಡಿದ್ದಾರೆ.

ಹಿಮಾಚಲ ಪ್ರದೇಶದ ಉನಾದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನದ ಸಂದರ್ಭದಲ್ಲಿ ಪಿಎಂ ಶ್ರೀ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿರುವ ಅವರು, ಮೊದಲ ಬಾಹ್ಯಾಕಾಶ ಯಾತ್ರಿಕ ಯಾರು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದಾರೆ. ಆಗ ವಿದ್ಯಾರ್ಥಿಗಳು ನೀಲ್ ಆರ್ಮ್​ಸ್ಟ್ರಾಂಗ್ ಎಂದು ಉತ್ತರ ನೀಡಿದ್ದಾರೆ. ಆದರೆ ಮುಂದುವರೆದು ನಗುತ್ತಾ ಮಾತನಾಡಿರುವ ಠಾಕೂರ್, ಮೊದಲ ಗಗನಯಾತ್ರಿ ಹನುಮಾನ್ ಜಿ ಎಂದು ಭಾವಿಸುತ್ತೇನೆ ಎಂದು ವಿವರಣೆ ನೀಡಿದ್ದಾರೆ.

ನಾವು ಇನ್ನೂ ನಮ್ಮನ್ನುಇರುವಂತೆಯೇ ನೋಡುತ್ತೇವೆ. ನಮ್ಮ ಸಾವಿರಾರು ವರ್ಷಗಳ ಹಳೆಯ ಸಂಪ್ರದಾಯ, ಜ್ಞಾನ, ಸಂಸ್ಕೃತಿಯನ್ನು ನಾವು ತಿಳಿಯುವ ತನಕ ಬ್ರಿಟಿಷರು ತೋರಿಸಿದಂತೆಯೇ ಇರುತ್ತೇವೆ. ಆದ್ದರಿಂದ, ನಾನು ಪ್ರಾಂಶುಪಾಲರು ಮತ್ತು ನೀವೆಲ್ಲರೂ ಪಠ್ಯಪುಸ್ತಕಗಳಿಂದ ಹೊರಗೆ ಯೋಚಿಸಿ. ನಮ್ಮ ರಾಷ್ಟ್ರ, ನಮ್ಮ ಸಂಪ್ರದಾಯಗಳು, ನಮ್ಮ ಜ್ಞಾನವನ್ನು ನೋಡಬೇಕೆಂದು ವಿನಂತಿಸುತ್ತೇನೆ. ಆ ದಿಕ್ಕಿನಿಂದ ನೋಡಿದರೆ ಬಹಳಷ್ಟು ವಿಷಯಗಳನ್ನು ಕಾಣಬಹುದು ಎಂದಿದ್ದಾರೆ.

ಸುಮಾರು ನಲವತ್ತು ವರ್ಷಗಳ ಹಿಂದೆ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ ಮೊದಲ ಭಾರತೀಯ ರಾಕೇಶ್ ಶರ್ಮಾ. ಈ ವರ್ಷದ ಆರಂಭದಲ್ಲಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ ಎರಡನೇ ಭಾರತೀಯ ಗಗನಯಾತ್ರಿ ಎನಿಸಿಕೊಂಡರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ದೆಹಲಿಯಲ್ಲಿ ಭಾರತೀಯ ಅಂತರಿಕ್ಷ ನಿಲ್ದಾಣದ (ಬಿಎಎಸ್) ಮಾದರಿಯನ್ನು ಅನಾವರಣಗೊಳಿಸಿತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net