ವಿಶ್ವದ ಮೊದಲ "ಟೀ" ಎಟಿಎಂ ಪ್ರಾರಂಭ…ಬಟನ್​ ಒತ್ತಿದ್ರೆ ಕೊಡುತ್ತೆ ನೀರು, ಚಹಾ, ಕಾಫಿ, ಬಿಸ್ಕತ್​!

world's first automatic vending machine for tea
ಹೈದರಾಬಾದ್​ ನಲ್ಲಿ ಪ್ರಾರಂಭವಾದ ಟೀ ಎಟಿಎಂ
Published on

ಹೈದರಾಬಾದ್: ಮನುಷ್ಯನ ಅಗತ್ಯತೆಯಿಲ್ಲದ ಎಐ(ಆರ್ಟಿಫಿಷಿಯಲ್​ ಇಂಟಲಿಜೆನ್ಸ್​) ಜತೆ ಕಾರ್ಯನಿರ್ವಹಿಸುವ ಚಹಾ, ಕಾಫಿ ಮತ್ತು ನೀರು ಪಡೆಯುವ ವಿಶ್ವದ ಮೊದಲ ಸ್ವಯಂಚಾಲಿತ ಮಾರಾಟ ಯಂತ್ರ ಗುರುವಾರ ನಗರದಲ್ಲಿ ಲೋಕಾರ್ಪಣೆಗೊಂಡಿದೆ.

ಯಂತ್ರವು ಸಂಪೂರ್ಣ ಸ್ವಯಂಚಾಲಿತವಾಗಿದ್ದು, ಬಿಸ್ಕತ್ತುಗಳನ್ನು ಸಹ ವಿತರಿಸುತ್ತದೆ. ಇದನ್ನು ಎಲ್ಟೀನಗರ ಎಲ್​ಪಿಟಿ ಮಾರ್ಕೆಟ್​ ಸಹಕಾರದೊಂದಿಗೆ ಪ್ರಾರಂಭಿಸಲಾಗಿದೆ. ಟಿಎಸ್​ ವೇರ್​ ಹೌಸಿಂಗ್​ ಕಾರ್ಪೋರೇಷನ್​ ಮುಖ್ಯಸ್ಥೆ ವೇದಾ ರಜನಿ ಶನಿವಾರ ಯಂತ್ರಕ್ಕೆ ಚಾಲನೆ ನೀಡಿದರು.

ಯಂತ್ರದ ಸಂಶೋಧಕ ಪಿ ವಿನೋದ್ ಕುಮಾರ್ ಮಾತನಾಡಿ, ಅಂತರ್ಗತ ಧ್ವನಿ ಸಹಾಯದಿಂದ ಬಳಕೆದಾರರು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ಜತೆಗೆ ಅವರ ಅಪೇಕ್ಷಿತ ಉತ್ಪನ್ನವನ್ನು ಆಯ್ಕೆ ಮಾಡಬೇಕು. ಈ ಯಂತ್ರದ ಬೆಲೆ 1ಲಕ್ಷ 67ಸಾವಿರ ರೂ.ಇದ್ದು, ಯಾರು ಬೇಕಾದರೂ ಖರೀದಿಸಬಹುದು ಎಂದರು.

"ಡಿಜಿಟಲ್​ ಚಾಯ್" ಅಥವಾ "ಚಾ ಎಟಿಎಂ" ಎಂದು ಕರೆಯುವ ಈ ಯಂತ್ರವನ್ನು ಹೈದರಾಬಾದ್​ನ ನಾಲ್ಕೂ ದಿಕ್ಕುಗಳಲ್ಲಿ ಸ್ಥಾಪಿಸುವ ಉದ್ದೇಶವಿದೆ. ಮಾಲ್ ಮತ್ತು ಮೆಟ್ರೋಗಳಲ್ಲಿ ಸ್ವಯಂಚಾಲಿತ ಈ ವಿತರಣಾ ಯಂತ್ರಗಳನ್ನು ಸದ್ಯಕ್ಕೆ ಸ್ಥಾಪಿಸಬಹುದಾಗಿದೆ ಎಂದು ಹೇಳಿದರು.

ಬ್ಯಾಂಕ್ ಸಾಲ ಮತ್ತು ವಿಮೆ ಸೌಲಭ್ಯದೊಂದಿಗೆ ರೆಫ್ರಿಜರೇಟರ್‌ಗಿಂತ ಕಡಿಮೆ ಬೆಲೆಯಲ್ಲಿ ಈ ಯಂತ್ರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net