More

    ಈಕೆಗೆ “ಜೀವಜಲವೇ” ಕಂಟಕ: ನೀರು ಕುಡಿಯಂಗಿಲ್ಲ ಯಾಕೆ?

    ಕ್ಯಾಲಿಫೋರ್ನಿಯಾ: ಹಲವು ವಿಧದ ಅಲರ್ಜಿಗಳನ್ನು ನೋಡಿದ್ದೇವೆ. ಆದರೆ ಜೀವಜಲ ಸಹ ಅಲರ್ಜಿಯಾಗಿ ಮಾನವನ ದೇಹಕ್ಕೆ ಕಂಟಕವಾದರೆ?…ಹೌದು ಇದು ಕೇಳಲಿಕ್ಕೆ ಮಿಥ್ಯವೆನಿಸಿದರೂ ಸತ್ಯ. ಅಮೆರಿಕಾದ ಮಹಿಳೆಯೊಬ್ಬಳು ನೀರಿನ ಅಪರೂಪದ ಅಲರ್ಜಿಯಿಂದ ಬಳಲುತ್ತಿದ್ದಾಳೆ. ಜಗತ್ತಿನಲ್ಲಿ ಇನ್ನೂ ಹಲವರು ಇಂತಹ ಅಪರೂಪದ ಕಾಯಿಲೆಗೆ ತುತ್ತಾಗಿದ್ದಾರೆ.

    ಟೆಸ್ಸಾ ಹ್ಯಾನ್ಸೆನ್ ಸ್ಮಿತ್ ಎಂಬಾಕೆ ಈ ಭಯಂಕರ ಅಲರ್ಜಿಗೆ ಗುರಿಯಾಗಿದ್ದು, ಸ್ನಾನ ಮಾಡುವುದು, ಮಳೆಯಲ್ಲಿ ನೆನೆಯುವುದು ಆಕೆಗೆ ನಿಷಿದ್ಧ. ಇನ್ನು ದಾಹವಾದರೆ ಹನಿ ನೀರು ಸಹ ಬಾಯಿಗೆ ಬಿಟ್ಟುಕೊಳ್ಳುವಂತಿಲ್ಲ. “ಅಕ್ವಾಜೆನಿಕ್ ಉರ್ಟಿಕೇರಿಯಾ” ಎಂಬ ಅಪರೂಪದ ಅಲರ್ಜಿ ಆಕೆಗೆ ಬೆಂಬಿಡದ ಭೇತಾಳನಂತೆ ಹಿಡಿದುಕೊಂಡಿರುವುದೇ ಇದಕ್ಕೆ ಕಾರಣ.

    ಟೆಸ್ಸಾ ಹ್ಯಾನ್ಸೆನ್ ಸ್ಮಿತ್ ಪ್ರಸ್ತುತ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಆಕೆ ಎಂಟನೇ ವಯಸ್ಸಿನವಳಿದ್ದಾಗ ನೀರು ಕುಡಿದರೆ ಮೈಮೇಲೆ ಬೊಬ್ಬೆಗಳು ಬರುತ್ತಿದ್ದವು. ಮೈಮೇಲೆ ನೀರು ತಾಕಿದರೂ ಅದೇ ಸ್ಥಿತಿ. ಆಕೆ ಮನೆಯಲ್ಲಷ್ಟೇ ಅಲ್ಲ, ಕಡೆಗೆ ಮನೆಯಿಂದ ಆಚೆ ಹೋಗೋಣವೆಂದರೆ ನಡೆಯುವಾಗಿ ಬೆವರು ಬಂದರೆ ಅದಕ್ಕೂ ಅಲರ್ಜಿಯಾಗುತ್ತಿತ್ತು.

    ನಿಜ ಹೇಳಬೇಕೆಂದರೆ ಪ್ರಸ್ತುತ ಆಕೆ ಸ್ನಾನ ಮಾಡದ ಸ್ಥಿತಿಗೆ ಈ ಕಾಯಿಲೆ ದೂಡಿದೆ. ನೀರು ಅಷ್ಟೇ ಅಲ್ಲ, ಮಂಜಿನ ಹನಿಗಳು ದೇಹಕ್ಕೆ ತಾಗಿದರೂ ಇಡೀ ಶರೀರ ಬೊಬ್ಬೆಗಳಾಗಿ ಉರಿಯುತ್ತದೆ. ಗಂಟಲಿಗೆ ನೀರು ಬಿದ್ದರೆ ಗಂಟಲಿನದೂ ಅದೇ ಸ್ಥಿತಿ. ಆಕೆ ತಾಯಿ ವೈದ್ಯರಾದರೂ ತನ್ನ ಮಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿಲ್ಲ.

    ಅವಳು ಸುಮಾರು 8 ವರ್ಷ ವಯಸ್ಸಿನವಳಿದ್ದಾಗ “ನೀರಿನ ಅಲರ್ಜಿ” ಎದುರಾಯಿತು. ಅದು ವರ್ಷಗಳು ಉರುಳುತ್ತಿದ್ದಂತೆ ತೀವ್ರವಾಗಿ ಆರೋಗ್ಯ ಹದಗೆಟ್ಟಿದೆ. ತನ್ನ ದಿನಗಳನ್ನು ಮನೆಯೊಳಗೆ ಕಳೆಯುತ್ತಾಳೆ, ಯಾವುದಾದರೂ ಚಿತ್ರ ಬಿಡಿಸುವುದು, ಬೆಕ್ಕುಗಳೊಂದಿಗೆ ಆಟವಾಡುವುದರಲ್ಲಿ ತಲ್ಲೀನಳಾಗುತ್ತಾಳೆ ಎಂದು ಆಕೆ ತಾಯಿ ಹೇಳುತ್ತಾರೆ.

    ಟೆಸ್ಸಾ ನಿರ್ಜಲೀಕರಣಗೊಂಡ ಪರಿಣಾಮ ಇತ್ತೀಚೆಗೆ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ರಕ್ತಕೊರತೆಯನ್ನು ಸರಿಪಡಿಸಲಾಯಿತಾದರೂ ರಕ್ತದ ಹರಿವು ನಿರ್ಬಂಧಿಸಲ್ಪಟ್ಟಿದ್ದರಿಂದ ಗಂಭೀರ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಸತತ ಚಿಕಿತ್ಸೆಯಿಂದ ಈಗ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ.

    ಆಕೆಯ ಇತ್ತೀಚಿನ ಆಸ್ಪತ್ರೆ ವೆಚ್ಚ $100,000 ಆಗಿದೆ. ಇದರಲ್ಲಿ $10,000 ವಿಮೆ ಇದ್ದರೂ, ಕುಟುಂಬಕ್ಕೆ ವೈದ್ಯಕೀಯ ವೆಚ್ಚ ಬರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಆಕೆಯ ಕುಟುಂಬ “ಗೋ ಫಂಡ್​ ಮೀ” ವೆಬ್​ಸೈಟ್​ ಸ್ಥಾಪಿಸಿ ಸಾರ್ವಜನಿಕರಿಂದ ನೆರವಿಗೆ ಕೈ ಚಾಚಿದೆ.

    ಆಕೆ ಕುರಿತು “ಕ್ರಾನಿಕ್ಲಿ ಎಂಪವರ್ಡ್” ಎಂಬ ಶೀರ್ಷಿಕೆ ಹೊತ್ತ ಪುಸ್ತಕ ಬಂದಿದೆ. ಡಾ. ಓಜ್ ಶೋನಲ್ಲಿ ಕಾಣಿಸಿಕೊಂಡಿದ್ದಾಳೆ. “ನೀರಿನ ಅಲರ್ಜಿ ನನಗೆ ಸಂಭವಿಸದಿದ್ದರೆ ಜೀವನವು ಎಷ್ಟು ಸುಂದರವಾಗಿರುತ್ತಿತ್ತು ಎಂದು ನಾನು ಯಾವಾಗಲೂ ಯೋಚಿಸುತ್ತೇನೆ, ಆದರೆ ಇದರಿಂದ ಹೊರಬರಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿರುವ ಕಾರಣ, ನಾನು ಇತರರಿಗೆ ಯಾವ ರೀತಿಯ ಸಹಾಯ ಮಾಡಬಹುದು ಎಂಬುದನ್ನು ಯೋಚಿಸುತ್ತಿದ್ದೇನೆ ಎಂದು ಟೆಸ್ಸಾ ಹೇಳಳುತ್ತಾರೆ.

    ಟೆಸ್ಸಾ ಜೀವನ ಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆ ತನ್ನ Instagram ಪುಟವನ್ನು ಲಿವಿಂಗ್ ವಾಟರ್‌ಲೆಸ್ ಅನ್ನು ಅಪರೂಪದ ಪರಿಸ್ಥಿತಿಗಳೊಂದಿಗೆ ಅಭಿಪ್ರಾಯ ಹಂಚಿಕೊಳ್ಳುತ್ತಾಳೆ. ವಿಶ್ವಾದ್ಯಂತ 100 ರಿಂದ 250 ಜನರು ಅಕ್ವಾಜೆನಿಕ್ ಉರ್ಟೇರಿಯಾ ಎದುರಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts