190 ಕೆ.ಜಿ. ತೂಕವಿದ್ದ ವಿಶ್ವದ ಅತ್ಯಂತ ದಪ್ಪ ಬಾಲಕ ಈಗ ಯಾವ ರೀತಿ ಫಿಟ್ ಆಗಿದ್ದಾನೆಂದರೆ ನೀವು ನಂಬಲು ಅಸಾಧ್ಯ!

fat boy
Published on

ಬೆಂಗಳೂರು: ಕೆಲವು ವರ್ಷಗಳ ಹಿಂದೆ ಆರ್ಯ ಪರ್ಮಾನಾ ವಿಶ್ವದ ಅತ್ಯಂತ ದಪ್ಪ ಮತ್ತು ತೂಕದ ಬಾಲಕ. ಆದರೆ ಈಗ ಆತ ತುಂಬಾ ಬದಲಾಗಿದ್ದಾನೆ. ಅವನನ್ನು ಗುರುತಿಸುವುದು ಸ್ವಲ್ಪ ಕಷ್ಟವಾಗಬಹುದು. ಸ್ಥೂಲಕಾಯತೆಯಿಂದಾಗಿ ಈ ಹುಡುಗ ಪ್ರಪಂಚದಾದ್ಯಂತ ಚರ್ಚೆಯ ವಿಷಯವಾಗಿದ್ದನು. ಆದರೆ ಈಗ ಈ ಹುಡುಗ ಎಷ್ಟರ ಮಟ್ಟಿಗೆ ಫಿಟ್ ಆಗಿದ್ದಾನೆ ಅಂದರೆ ನೀವು ನಂಬಲು ಅಸಾಧ್ಯ!  

ಸ್ನಾನಕ್ಕೆ ಈಜುಕೊಳವೇ  ಬೇಕಿತ್ತು

ಇಂಡೋನೇಷ್ಯಾ ವಾಸಿಯಾದ ಆರ್ಯ ಪರ್ಮಾನ ಸುಮಾರು 190 ಕೆ.ಜಿ. ತೂಕವಿದ್ದನೆಂದರೆ ಅವನ ದೇಹವು ಎಷ್ಟು ದೊಡ್ಡದಾಗಿತ್ತು ಎಂದು ಊಹಿಸಿಕೊಳ್ಳಬಹುದು. ಅವನಿಗೆ ಸ್ನಾನ ಮಾಡಲು ಪ್ರತ್ಯೇಕ ಈಜುಕೊಳವೇ  ಬೇಕಾಗಿತ್ತು. ಆಹಾರ ಕೂಡ ತಿನ್ನಲು ಆಗುತ್ತಿರಲಿಲ್ಲ. ದಿನಕ್ಕೆ ಐದು ಸಮಯ ಊಟ ಬೇಕಾಗಿತ್ತು. ಆಹಾರದಲ್ಲಿ ಅಕ್ಕಿ, ಮೀನು, ಮಾಂಸ, ತರಕಾರಿ ಸೂಪ್ ಮತ್ತು ಸಾಂಪ್ರದಾಯಿಕ ಸೋಯಾ ಪ್ಯಾಟಿ ಸೇರಿತ್ತು.  

2014 ರಲ್ಲಿ, ಆರ್ಯ ಎಂಟು ವರ್ಷಕ್ಕೆ ಬಂದಾಗ ಅವನ ಹಸಿವು ಮತ್ತಷ್ಟು ಹೆಚ್ಚಾಯಿತು. ಅನಿಯಂತ್ರಿತವಾಗಿ ತಿನ್ನಲು ಪ್ರಾರಂಭಿಸಿದರು, ಇದರಿಂದಾಗಿ ಅವನ ತೂಕವು ವೇಗವಾಗಿ ಹೆಚ್ಚಾಗಲು ಪ್ರಾರಂಭಿಸಿತು. ಇದಾದ ನಂತರ ಅವನು ವಿಶ್ವದ ಅತ್ಯಂತ ದಪ್ಪ ಬಾಲಕ ಎಂಬ ಬಿರುದನ್ನು ಪಡೆದರು. ಕೊನೆಗೆ  ಅವನಿಗೆ ನಡೆಯಲು ಅಥವಾ ತಿನ್ನಲು ಸಾಧ್ಯವಾಗಲಿಲ್ಲ. ಆದರೆ ನಂತರ ಅವನು ಎಲ್ಲವನ್ನೂ ಬದಲಾಯಿಸಲು ನಿರ್ಧರಿಸಿದ.    

ಇಂಡೋನೇಷ್ಯಾದ ಆರ್ಯ, ಸೆಲೆಬ್ರಿಟಿ ಪರ್ಸನಲ್ ಟ್ರೈನರ್ ಮತ್ತು ಬಾಡಿಬಿಲ್ಡರ್ ಅದೆ ರೈ ಅವರೊಂದಿಗೆ ಮಾತುಕತೆ ನಡೆಸಿ ಫಿಟ್ ಆಗಲು ನಿರ್ಧರಿಸಿದ. ಸಾಕಷ್ಟು ಕಟ್ಟುನಿಟ್ಟಾದ ಡಯಟ್ ಪ್ಲಾನ್ ಮಾಡಿ, ತುಂಬಾ ಕಷ್ಟಪಟ್ಟ ಆರ್ಯ. ತನ್ನ ಹೊಟ್ಟೆಯನ್ನು ಕಡಿಮೆ ಮಾಡಲು ಮತ್ತು ಹಸಿವನ್ನು ನಿಯಂತ್ರಿಸಲು ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.     

ಈಗ ಆರ್ಯ ಅವರ ತೂಕ ಸುಮಾರು 87 ಕೆ.ಜಿ. ಈ ತೂಕವು ಹಿಂದಿನ ತೂಕದ ಅರ್ಧಕ್ಕಿಂತ ಕಡಿಮೆಯಾಗಿದೆ. ಈಗ ಆರ್ಯ ಅವರನ್ನು ನೋಡಿ, ಅವರೇ ತೂಕ ಇಳಿಸಿಕೊಂಡ ಮೇಲೆ ನಮಗೇಕೆ ಸಾಧ್ಯವಿಲ್ಲ ಎಂದು ಜನರು ಹೇಳುತ್ತಾರೆ? ಆರ್ಯ ಅವರ ತೂಕದ ಬಗ್ಗೆ ವಿಡಿಯೋ ಎಲ್ಲೆಡೆ ವೈರಲ್ ಆಗಿ ಸ್ಥಳೀಯ ಮುಖಂಡರು ಅವರನ್ನು ಭೇಟಿ ಮಾಡಲು ಬಂದರು. ಸದ್ಯ ಆರ್ಯ ತೂಕ ಇಳಿಸಿಕೊಂಡು ಸಾಮಾನ್ಯ ಹುಡುಗನಂತೆ ಕಾಣಿಸಿಕೊಂಡಿದ್ದಾನೆ ಎಂದು ತಿಳಿದ ಅವರು ಆರ್ಯನನ್ನು ಅಭಿನಂದಿಸಿದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net