ಇದೇ ನೋಡಿ 2025 ರ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ|Airports

plane
Published on

Airports| ಅತಿ ದೂರ ಪ್ರಯಾಣ ಮಾಡುವ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ಒಂದೊಂದು ವಿಮಾನ ನಿಲ್ದಾಣಗಳು ವಿಭಿನ್ನ ಶೈಲಿಯಲ್ಲಿ ನಿರ್ಮಾಣವಾಗಿರುತ್ತವೆ. ಹಾಗಿದ್ರೆ ವಿಶ್ವದಲ್ಲೇ ಅತ್ಯಂತ ಉತ್ತಮವಾದ ವಿಮಾನ ನಿಲ್ದಾಣ ಯಾವುದೆಂದು ತಿಳಿಯೋಣ.

ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣವನ್ನು ವಾಯು ಸಾರಿಗೆ ರೇಟಿಂಗ್ ಸಂಸ್ಥೆ ಸ್ಕೈಟ್ರಾಕ್ಸ್, 2025 ರ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಎಂದು ಪರಿಗಣಿಸಿದೆ. ಬರೋಬ್ಬರಿ ಹದಿಮೂರನೇ ಬಾರಿಗೆ ಸಿಂಗಾಪುರ ಚಾಂಗಿ ವಿಮಾನ ನಿಲ್ದಾಣವು ಈ ಅತ್ಯುನ್ನತ ಪ್ರಶಸ್ತಿಯನ್ನು ಪಡೆದಿದೆ. ಚಾಂಗಿ ಒಂದು ಅದ್ಭುತ ತಾಣವಾಗಿದ್ದು, ಪ್ರಯಾಣಿಕರು ತಮ್ಮ ವಿಮಾನ ಹಾರಾಟಕ್ಕೆ 48 ಗಂಟೆಗಳ ಮೊದಲು ತಮ್ಮ ಬ್ಯಾಗ್‌ಗಳನ್ನು ಬಿಡಲು ಇಲ್ಲಿ ಆರಂಭಿಕ ಚೆಕ್-ಇನ್ ಅನ್ನು ಪರಿಚಯಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರು ಇಲ್ಲಿ ಹೆಚ್ಚಿನ ಸಮಯವನ್ನು ಕಳೆಯಲು ಇಚ್ಛಿಸುತ್ತಾರೆ.

ಅತ್ಯಂತ ದೊಡ್ಡ ಕಟ್ಟಡ ಹೊಂದಿರುವ ವಿಮಾನ ನಿಲ್ದಾಣ ಇದಾಗಿದ್ದು, ಜ್ಯುವೆಲ್ ಶಾಪಿಂಗ್ ಮಾಲ್‌, ಒಳಾಂಗಣ ಉದ್ಯಾನಗಳು, ವಿಶ್ವದ ಅತಿದೊಡ್ಡ ಒಳಾಂಗಣ ಜಲಪಾತ, ಸ್ಪಾಗಳು, ಹೋಟೆಲ್‌ಗಳು, ಕಲಾ ಪ್ರದರ್ಶನಗಳು, ವಸ್ತುಸಂಗ್ರಹಾಲಯ, ಸಿನಿಮಾ ಥಿಯೇಟರ್​ನ್ನು ಇದು ಒಳಗೊಂಡಿದೆ. ಇದು ಏಪ್ರಿಲ್ 9 ರಂದು ಮ್ಯಾಡ್ರಿಡ್‌ನಲ್ಲಿ ನಡೆದ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್‌ನಲ್ಲಿ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ.

2ನೇ ಸ್ಥಾನ

ದೋಹಾದ ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಈ ವರ್ಷ 2 ನೇ ಸ್ಥಾನದಲ್ಲಿದೆ. ಜೊತೆಗೆ ಶಾಪಿಂಗ್ ಮಾಲ್​ ವೈಶಿಷ್ಟ್ಯ ಹಾಗೂ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣಕ್ಕಾಗಿ ಇದು ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದು ಈ ಹಿಂದೆ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣವೆಂದು ಮೂರು ಬಾರಿ ಪ್ರಶ್ತಿ ಮುಡಿಗೇರಿಸಿಕೊಂಡಿತ್ತು.

3ನೇ ಸ್ಥಾನ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ವಿಮಾನ ನಿಲ್ದಾಣಕ್ಕಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಟೋಕಿಯೊ ಹನೆಡಾ ವಿಮಾನ ನಿಲ್ದಾಣವು 3 ನೇ ಸ್ಥಾನದಲ್ಲಿದೆ. ವಿಶ್ವದ ಸ್ವಚ್ಛ ವಿಮಾನ ನಿಲ್ದಾಣ ಹಾಗೂ ಅತ್ಯುತ್ತಮ ದೇಶೀಯ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

2025 ರ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣಗಳು:

20. ಬಹ್ರೇನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

19. ಆಂಸ್ಟರ್‌ಡ್ಯಾಮ್ ಶಿಪೋಲ್ ವಿಮಾನ ನಿಲ್ದಾಣ

18. ಕೋಪನ್ ಹ್ಯಾಗನ್ ವಿಮಾನ ನಿಲ್ದಾಣ

17. ಚುಬು ಸೆಂಟ್ರೇರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

16. ಮೆಲ್ಬೋರ್ನ್ ವಿಮಾನ ನಿಲ್ದಾಣ

15. ವಿಯೆನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

14. ಇಸ್ತಾನ್‌ಬುಲ್ ವಿಮಾನ ನಿಲ್ದಾಣ

13. ವ್ಯಾಂಕೋವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

12. ಹೆಲ್ಸಿಂಕಿ-ವಾಂಟಾ ವಿಮಾನ ನಿಲ್ದಾಣ

11. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

10. ಜ್ಯೂರಿಚ್ ವಿಮಾನ ನಿಲ್ದಾಣ

9. ಮ್ಯೂನಿಚ್ ವಿಮಾನ ನಿಲ್ದಾಣ

8. ರೋಮ್ ಫಿಯುಮಿಸಿನೊ ವಿಮಾನ ನಿಲ್ದಾಣ

7. ಪ್ಯಾರಿಸ್ ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣ

6. ಹಾಂಗ್ ಕಾಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

5. ನರಿಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

4. ಇಂಚಿಯಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

3. ಟೋಕಿಯೋ ಹನೆಡಾ ವಿಮಾನ ನಿಲ್ದಾಣ

2. ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

1. ಸಿಂಗಾಪುರ ಚಾಂಗಿ ವಿಮಾನ ನಿಲ್ದಾಣ

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net