

ಬೆಂಗಳೂರು: ಇಂದು ವಿಶ್ವ ಪ್ರವಾಸೋದ್ಯಮ ದಿನ. ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ (UNWTO) 1970 ರಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲು ಘೋಷಿಸಿತು. ಪ್ರತಿ ವರ್ಷದಂತೆ, UNWTO ಸೌದಿ ಅರೇಬಿಯಾವನ್ನು ವಿಶ್ವ ಪ್ರವಾಸೋದ್ಯಮ ದಿನದ 2023 ರ ಆತಿಥೇಯ ರಾಷ್ಟ್ರವೆಂದು ನಿರ್ಧರಿಸಿದೆ. ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳನ್ನು ಈ ವರ್ಷದ ಮುಖ್ಯ ವಿಷಯವಾಗಿ ಘೋಷಿಸಿದೆ.
ವಿಶ್ವ ಪ್ರವಾಸೋದ್ಯಮ ದಿನದ ಈ ಸಂದರ್ಭದಲ್ಲಿ, ಪ್ರವಾಸೋದ್ಯಮದಲ್ಲಿ ವೃತ್ತಿ ಆಯ್ಕೆ ಮಾಡಿಕೊಳ್ಳಲು ಬಯಸುವವರಿಗೆ, ಸರ್ಕಾರಿ ಉದ್ಯೋಗ ಪಡೆಯುವ ವಿಶೇಷ ಆಸೆಯನ್ನು ಹೊಂದಿರುವ ಅಭ್ಯರ್ಥಿಗಳಿಗೆ, ಈ ಕ್ಷೇತ್ರದಲ್ಲಿ ಯಾವ ಆಯ್ಕೆಗಳು ಲಭ್ಯವಿದೆ ಎಂಬುದನ್ನು ನೋಡೋಣ...
ಎಲ್ಲೆಲ್ಲಿ ಖಾಲಿಯಿದೆ?
ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ITDC), ಟೂರಿಸಂ ಆಂಡ್ ಹಾಸ್ಪಿಟಾಲಿಟಿ ಇನ್‌ಸ್ಟಿಟ್ಯೂಟ್ ಮ್ಯಾನೇಜ್‌ಮೆಂಟ್ ಸಿಸ್ಟಂ (THIMS), ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೂರಿಸಂ ಅಂಡ್ ಟ್ರಾವೆಲ್ ಮ್ಯಾನೇಜ್‌ಮೆಂಟ್ (IITTM), ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ (IHM) ನಲ್ಲಿ ವಿವಿಧ ಗ್ರೂಪ್ ಎ, ಗ್ರೂಪ್ ಬಿ, ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ಸರ್ಕಾರಿ ಉದ್ಯೋಗಗಳು ಲಭ್ಯವಿದೆ.
ಎಲ್ಲಿ ಮತ್ತು ಹೇಗೆ ನೇಮಕಾತಿ ನಡೆಯಲಿದೆ?
ಕೇಂದ್ರ ಅಥವಾ ರಾಜ್ಯವಾಗಿರಲಿ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗಗಳನ್ನು ಸಾಮಾನ್ಯವಾಗಿ ಗ್ರೂಪ್ ಲೆವೆಲ್ (ಎ, ಬಿ, ಸಿ ಮತ್ತು ಡಿ) ಪ್ರಕಾರ ಪ್ರತ್ಯೇಕವಾಗಿ ನೀಡಲಾಗುತ್ತದೆ. ಪ್ರವಾಸೋದ್ಯಮ ಸಂಬಂಧಿತ ಇಲಾಖೆಗಳು ಮತ್ತು ಕೇಂದ್ರ ಇಲಾಖೆಗಳಲ್ಲಿನ ಕಂಪನಿಗಳಲ್ಲಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಿಗೆ ನೇಮಕಾತಿ ಕುರಿತು ಮಾತನಾಡುವುದಾದರೆ ಇವುಗಳಿಗೆ ನೇಮಕಾತಿಯನ್ನು ಪ್ರತಿ ವರ್ಷ ನಡೆಸಲಾಗುವ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಮೂಲಕ, ಸಿಬ್ಬಂದಿ ಆಯ್ಕೆ ಆಯೋಗ (SSC)ದ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (CGL) ಪರೀಕ್ಷೆಯ ಮೂಲಕ ಮಾಡಲಾಗುತ್ತದೆ. ಕೇಂದ್ರ ಇಲಾಖೆಗಳಲ್ಲಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ನೇಮಕಾತಿಯನ್ನು ಎಸ್‌ಎಸ್‌ಸಿಯ ಇತರ ಪರೀಕ್ಷೆಗಳು, ಕಂಬೈನ್ಡ್ ಹೈಯರ್ ಸೆಕೆಂಡರಿ (ಸಿಎಚ್‌ಎಸ್‌ಎಲ್) ಪರೀಕ್ಷೆ ಮತ್ತು ಮಲ್ಟಿ-ಟಾಸ್ಕಿಂಗ್ (ನಾನ್-ಟೆಕ್ನಿಕಲ್) ಸ್ಟಾಫ್ (ಎಂಟಿಎಸ್) ಪರೀಕ್ಷೆಯ ಮೂಲಕ ಮಾಡಲಾಗುತ್ತದೆ.
ರಾಜ್ಯ ಸರ್ಕಾರವಾದರೆ ಪ್ರವಾಸೋದ್ಯಮ ಸಂಬಂಧಿತ ಇಲಾಖೆಗಳು ಮತ್ತು ಕಂಪನಿಗಳಲ್ಲಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಆಯಾ ರಾಜ್ಯ ಲೋಕಸೇವಾ ಆಯೋಗವು ನಡೆಸುವ ರಾಜ್ಯ ನಾಗರಿಕ ಸೇವೆಗಳ ಪರೀಕ್ಷೆಗಳ ಮೂಲಕ ಮಾಡಲಾಗುತ್ತದೆ. ಮತ್ತೊಂದೆಡೆ, ರಾಜ್ಯಗಳಲ್ಲಿನ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಗ್ರೂಪ್ C ಮತ್ತು ಗ್ರೂಪ್ D ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಆಯಾ ರಾಜ್ಯದ ಕಮಿಷನ್ ಮಾಡಲಾಗುತ್ತದೆ (ಉದಾ: ಕರ್ನಾಟಕಕ್ಕೆ KPSC, ಉತ್ತರ ಪ್ರದೇಶಕ್ಕೆ UPSSSC, ಬಿಹಾರಕ್ಕೆ BSSC, RSMSSB ರಾಜಸ್ಥಾನ, ಇತ್ಯಾದಿ).
ಇವುಗಳಲ್ಲದೆ, ಕೆಲವೊಮ್ಮೆ ಕೇಂದ್ರ ಅಥವಾ ರಾಜ್ಯ ಪ್ರವಾಸೋದ್ಯಮ ಸಂಬಂಧಿತ ಇಲಾಖೆಗಳು ಮತ್ತು ಕಂಪನಿಗಳಿಂದ ಪ್ರತ್ಯೇಕ ನೇಮಕಾತಿಗಳನ್ನು ಮಾಡಲಾಗುತ್ತದೆ. ಅಭ್ಯರ್ಥಿಗಳು ಈ ಎಲ್ಲಾ ನೇಮಕಾತಿಗಳ ಬಗ್ಗೆ ಉದ್ಯೋಗ ಸುದ್ದಿ ಮತ್ತು ದಿನಪತ್ರಿಕೆಗಳಿಂದ ಮಾಹಿತಿಯನ್ನು ಪಡೆಯಬಹುದು.