ವಿಶ್ವ ರೇಬಿಸ್ ದಿನಾಚರಣೆ

15
Published on


ಮೈಸೂರು: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪೀಪಲ್ ಫಾರ್ ಅನಿಮಲ್ಸ್ ಸಹಯೋಗದಲ್ಲಿ ಶನಿವಾರ ವಿಶ್ವ ರೇಬಿಸ್ ದಿನ ಆಚರಿಸಲಾಯಿತು.
ಪಿಎಫ್‌ಎ ಶೆಲ್ಟರ್, ರೂಪನಗರ, ಬೋಗಾದಿಯಲ್ಲಿನ ಪ್ರಾಣಿಗಳಿಗೆ ರೇಬಿಸ್ ನಿರೋಧಕ ಲಸಿಕೆ ಹಾಕುವ ಮೂಲಕ ದಿನವನ್ನು ಆಚರಿಸಲಾಯಿತು. ನಂತರ ನಗರದ ಕೆ.ಜಿ.ಕೊಪ್ಪಲು ಮತ್ತು ಟಿ.ಕೆ.ಲೇಔಟ್‌ನಲ್ಲಿ ಬೀದಿ ನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆ ಹಾಕಲಾಯಿತು.
ಇಲಾಖೆಯ ಉಪ ನಿರ್ದೇಶಕ ಡಾ.ನಾಗರಾಜು, ಸಹಾಯಕ ನಿರ್ದೇಶಕ ಡಾ.ಪೂರ್ಣಾನಂದ, ಪಶುವೈದ್ಯಾಧಿಕಾರಿಗಳಾದ ಡಾ.ಸಂತೋಷ ಒಡೆಯರ್, ಡಾ.ರಮಿತ್, ಡಾ.ಹರ್ಷಿತ್, ಸಿಬ್ಬಂದಿ ಮಲ್ಲೇಶ್, ಚಂದ್ರಕಲಾ, ಗೋಪಿ, ಪಿಎಫ್‌ಎ ಮುಖ್ಯಸ್ಥೆ ಸವಿತಾ ನಾಗಭೂಷಣ್, ಅನಿಲ್, ಡಾ.ಅಮರದೀಪ್ ಸಿಂಗ್, ಡಾ.ಲೋಕೇಶಬಾಬು, ಡಾ.ದಿಲೀಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net