ವಿಶ್ವ ಜನಸಂಖ್ಯಾ ದಿನಾಚರಣೆ ಕುರಿತು ಜಾಗೃತಿ ಜಾಥಾ

27-RNR-04
Published on

ಹಾವೇರಿ: ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ಜನಸಂಖ್ಯಾ ದಿನಾಚರಣೆ ನಿಮಿತ್ತ ತಾಲೂಕಿನ ಹೊಸರಿತ್ತಿಯ ಜಿ.ವಿ.ಎಚ್​ ಕಾಲೇಜ್​ನಲ್ಲಿ ಜಾಗೃತಿ ಜಾಥಾ ಜರುಗಿತು.

ಗ್ರಾಪಂ ಅಧ್ಯಕ್ಷ ಸತೀಶ ಜಂಗಳಿ ಜಾಥಾಕ್ಕೆ ಚಾಲನೆ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ ಮಾತನಾಡಿ, ಮಹಿಳೆಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ಥಿರತೆಯು ತಾಯ್ತನಕ್ಕೆ ಸರಿಯಾದ ವಯಸ್ಸು ಈ ವರ್ಷದ ೂಷವಾಕ್ಯವಾಗಿದೆ. ಜನಸಂಖ್ಯೆ ಹೆಚ್ಚಳದಿಂದ ಆಗುವ ಸಮಸ್ಯೆಗಳ ಕುರಿತು ಅರಿವು ಮೂಡಿಸಲು ವಿಶ್ವ ಜನಸಂಖ್ಯೆ ದಿನ ಆಚರಿಸಲಾಗುತ್ತಿದೆ ಎಂದರು.

ಪ್ರಾಚಾರ್ಯ ಎಫ್​.ಐ. ಶಿಗ್ಲಿ ಅಧ್ಯಕ್ಷತೆ ವಹಿಸಿದ್ದರು. ಜನಸಂಖ್ಯಾ ಹೆಚ್ಚಳದಿಂದ ದೇಶಕ್ಕೆ ಆಗುವ ತೊಂದರೆ ಕುರಿತು ಉಪನ್ಯಾಸಕ ಶೇಖರ ಭಜಂತ್ರಿ ಉಪನ್ಯಾಸ ನೀಡಿದರು.

ಗ್ರಾಪಂ ಉಪಾಧ್ಯೆ ವಾಣಿಶ್ರೀ ಏಕಬೋಟೆ, ಕೃಷ್ಣಪ್ಪ ಕನ್ನಮ್ಮನವರ, ಆರೋಗ್ಯ ನಿರೀಕ್ಷಣಾಧಿಕಾರಿ ಮಾಲತೇಶ ಪುಟ್ಟಣಗೌಡರ, ಉಪನ್ಯಾಸಕ ವೈ.ಯು. ಸವೂರ, ಡಾ. ಎಂ.ಎಚ್​. ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net