ಜನಸಂಖ್ಯೆ ಏರಿಕೆ ಕುರಿತು ತಿಳುವಳಿಕೆ ಬರಬೇಕು; ಡಾ. ರಾಜೇಶ್ವರಿ

24-RNR-03
Published on

ರಾಣೆಬೆನ್ನೂರ: ಪ್ರಸ್ತುತ ದಿನಮಾನಗಳಲ್ಲಿ ಯುವಜನತೆ ದೇಶದ ಸಂಪತ್ತು, ಆದರೆ ಮುಂದಿನ ದಿನದಲ್ಲಿ ದೇಶಕ್ಕೆ ಆಪತ್ತು ಆಗಬಾರದು. ಆದ್ದರಿಂದ ಜನಸಂಖ್ಯೆ ಏರಿಕೆ ಕುರಿತು ತಿಳುವಳಿಕೆ ಯುವಕರಲ್ಲಿ ಬರಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ವರಿ ಕದರಮಂಡಲಗಿ ಹೇಳಿದರು.

ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಬಿಎಜೆಎಸ್​ಎಸ್​ ಮಹಿಳಾ ಪದವಿ-ಪೂರ್ವ ಕಾಲೇಜ್​ ವತಿಯಿಂದ ವಿಶ್ವ ಜನಸಂಖ್ಯಾ ದಿನಾಚರಣೆ ನಿಮಿತ್ತ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜನಸಂಖ್ಯೆ ಸ್ಫೋಟದಿಂದ ಪರಿಸರ ನಾಶ, ಆಹಾರ ಸಮಸ್ಯೆ ಸೇರಿ ನಾನಾ ಬಗೆಯ ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ಜನಸಂಖ್ಯೆ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.

ಪ್ರಾಚಾರ್ಯ ಎಚ್​.ಬಿ. ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಲಗೇರಿ ರಸ್ತೆಯಿಂದ ಹೊರಟ ಜಾಗೃತಿ ಜಾಥಾ ಕೋರ್ಟ್​ ವೃತ್ತ, ಪೋಸ್ಟ್​ ವೃತ್ತ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ನಗರಸಭೆ ಅಧ್ಯೆ ಚಂಪಕ ಬಿಸಲಹಳ್ಳಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಜಣ್ಣ ಮೊಟಗಿ, ನಿವೃತ್ತ ಉಪನ್ಯಾಸಕ ಎಚ್​.ಎ. ಭಿಕ್ಷಾವತಿರ್ಮಠ, ಡಾ. ರಾಜು ಶಿರೂರು, ದೇವೆಂದ್ರಪ್ಪ ಡಿ.ಎಸ್​., ನಾಗರಾಜ ಕುಡಪಲಿ, ಎಸ್​.ಸಿ. ಕೋರಿ, ಶೋಭಾ ಬಸೆನಾಯ್ಕರ, ಶಂಕರ ಜಿ.ಎಸ್​., ಬಿಇಒ ಎಂ.ಎಸ್​. ಅಡಿಗ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net