ಇಂದು ವಿಶ್ವ ನಗು ದಿನ: ಡುಂಡಿರಾಜ್​ ಅವರ ಈ ಹಾರೈಕೆ ಕೇಳಿದ್ರೆ 'ಕರೊನಾ'ನೂ ನಗಬಹುದು...!

Laugh 3 May 20 1
Published on
ಎಲ್ಲರ ಬದುಕೂ ಈಗ ಕರೊನಾ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಇದ್ದಲ್ಲೇ ಇದ್ದು ಎಲ್ಲರಿಗೂ ಬೋರಾಗಿದೆ. ಮೊಬೈಲು, ಟಿ.ವಿ. ನೋಡಿ ನೋಡಿ ಸಾಕಾಗಿದೆ. ಇಂಥ ಹೊತ್ತಿನಲ್ಲೇ ನಮ್ಮೆಲ್ಲರನ್ನೂ ನಗಿಸಲು ಮತ್ತೊಂದು ‘ನಗೆ ದಿನ’ ಬಂದಿದೆ. ಕನ್ನಡದ ಖ್ಯಾತ ಹಾಸ್ಯ‘ಪನ್’ಡಿತರಾದ ಎಚ್. ಡುಂಡಿರಾಜ್ ಅವರು ‘ವಿಜಯವಾಣಿ’ ಓದುಗರಿಗಾಗಿಯೇ ಹನಿಗವನಗಳನ್ನು ಹೊಸೆದು ಕೊಟ್ಟಿದ್ದಾರೆ. ಬನ್ನಿ ಸವಿಯೋಣ.
ಪ್ರೀತಿ

ಹುಡುಗ ಹೇಳಿದ ಪ್ರಿಯೆ
ನನ್ನ ಪ್ರೀತಿ ಅಜರಾಮರ
ಸೂರ್ಯ ಚಂದ್ರ ಇರುವ ತನಕ
ಹುಡುಗಿ ಅಂದಳು ಪ್ರಿಯಾ
ನನ್ನ ಪ್ರೀತಿ ಹಾಗಲ್ಲ
ಫೋನಲ್ಲಿ ಕರೆನ್ಸಿ ಮುಗಿವ ತನಕ!

ಕೆಲಸವಿಲ್ಲ

ಪ್ರೇಮಿಗಳೇ ಇಲ್ಲದೆ
ಭಣಗುಡುತ್ತಿದೆ
ಕಬ್ಬನ್ ಪಾರ್ಕ್, ಲಾಲ್​ಬಾಗು
ಹೂಬಾಣ ಬಿಡಲು
ಕಾದಿರುವ ಮಾರನೆ
ಕೆಲಸವಿಲ್ಲ ಮನೆಗೆ ಹೋಗು!

ಹಾರೈಕೆ

ಕರೊನಾ ಕರೊನಾ
ಎನ್ನುತ್ತ ಎಲ್ಲರೂ
ಕವಿಗಾಳದದ್ದು ಕಂಡು
ಕೊರೆತಕ್ಕೆ ಅಂಜಿ
ಓಡಲಿ ವೈರಸ್​
ಕಿವಿಗಳ ಮುಚ್ಚಿಕೊಂಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net