ರಸ್ತೆ ಅಪಘಾತದ ಸಾವು ಭಾರತದಲ್ಲೇ ಅಧಿಕ; ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ವರದಿಯಲ್ಲಿ ಉಲ್ಲೇಖ

Published on

ನವದೆಹಲಿ: ರಸ್ತೆ ಅಪಘಾತಗಳಿಂದ ಜಗತ್ತಿನಲ್ಲಿ ಸಾವಿಗೀಡಾದ ಪ್ರತಿ ನೂರು ಜನರಲ್ಲಿ 13 ಮಂದಿ ಭಾರತೀಯರಿರುತ್ತಾರೆ. ಅದರಲ್ಲೂ ಆಗ್ನೇಯ ಏಷ್ಯಾದಲ್ಲೇ ಭಾರತದಲ್ಲಿ ಈ ಥರದ ಸಾವು ಹೆಚ್ಚು ಸಂಭವಿಸುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ರಸ್ತೆ ಸುರಕ್ಷತೆ ಕುರಿತು ಪ್ರಕಟಿಸಿರುವ ಇತ್ತೀಚಿನ ವರದಿ ಹೇಳಿದೆ.

ಜಗತ್ತಿನಲ್ಲಿ 2021ರಲ್ಲಿ ರಸ್ತೆ ಅಪಘಾತದಲ್ಲಿ ಸತ್ತವರ ಪೈಕಿ ಶೇ. 13 ಮಂದಿ ಭಾರತೀಯರು. ಭಾರತದಲ್ಲಿ 2010ರಲ್ಲಿ 1.34 ಲಕ್ಷ ಇದ್ದ ಸಾವಿನ ಸಂಖ್ಯೆ, 2021ರಲ್ಲಿ 1.54 ಲಕ್ಷಕ್ಕೆ ಏರಿದ್ದು, ಕಳೆದ ವರ್ಷ 1.68 ಲಕ್ಷ ಮಂದಿ ಸಾವಿಗೀಡಾಗಿದ್ದರು. ಅಲ್ಲದೆ ರಸ್ತೆ ಅಪಘಾತದ ಸಾವಿನ ಪ್ರಮಾಣ ಹೆಚ್ಚಾಗಿರುವ 65 ರಾಷ್ಟ್ರಗಳಲ್ಲಿ ಭಾರತ ಒಂದಾಗಿದೆ. ಮಾತ್ರವಲ್ಲ, ಆಗ್ನೇಯ ಏಷ್ಯಾದಲ್ಲಿ ಸಂಭವಿಸಿದ ಇಂಥ ಸಾವುಗಳ ಪೈಕಿ ಶೇ. 46 ಭಾರತಕ್ಕೆ ಸೇರಿದ್ದಾಗಿದೆ.

ರಸ್ತೆ ಅಪಘಾತಗಳಿಂದಾಗುತ್ತಿರುವ ಸಾವು ಜಾಗತಿಕವಾಗಿ ಇಳಿಯುತ್ತಿದ್ದರೂ ಭಾರತದಲ್ಲಿ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ರಸ್ತೆ ಸುರಕ್ಷತೆಗಾಗಿನ ಎನ್​ಜಿಒಗಳ ಜಾಗತಿಕ ಒಕ್ಕೂಟದ ಸದಸ್ಯ ಪ್ರೇರಣ ಸಿಂಗ್​ ಅರೋರಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net