Video: ಸಕತ್ ವರ್ಕ್​ಔಟ್​ ಮಾಡಿ ಟ್ವಿಟ್ಟರ್​​ನಲ್ಲಿ ಗಮನ ಸೆಳೆದ ಕೇಂದ್ರ ಕ್ರೀಡಾ ಸಚಿವ

kiran r
Published on

ನವದೆಹಲಿ: ಕೆಲವರು ಉಪದೇಶ ಹೇಳುತ್ತಾರೆ. ಆದರೆ, ಅದನ್ನು ಅವರೇ ಪಾಲಿಸುವುದಿಲ್ಲ. ಈ ಹೇಳಿಕೆಗೆ ಅಪವಾದ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜುಜು.

ಹೌದು, ಅವರು ಸದೃಡ ಆರೋಗ್ಯ ರೂಪಿಸಿಕೊಳ್ಳಿ ಎಂದು ಏಪ್ರಿಲ್ 7 ರ ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತ ಕರೆ ನೀಡಿದ್ದರು. ಆದರೆ, ಅವರು ಕೆಲ ರಾಜಕಾರಣಿಗಳಂತೆ ಕಾಟಾಚಾರಕ್ಕೆ ಹೇಳಿಕೆ ನೀಡಿ ಸುಮ್ಮನಾಗಲಿಲ್ಲ.

ಸ್ವತಃ ತಮ್ಮ ಟ್ವಿಟ್ಟರ್​ ಅಕೌಂಟ್​ನಲ್ಲಿ ತಾವು ಕಠಿಣ ವರ್ಕಔಟ್ ಮಾಡುತ್ತಿರುವ ವಿಡಿಯೋ ಪೋಸ್ಟ್​ ಮಾಡಿ, ಎಲ್ಲರೂ ವ್ಯಾಯಾಮದಿಂದ ಉತ್ತಮ ಆರೋಗ್ಯ ರೂಪಿಸಿಕೊಳ್ಳಿ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಅಲ್ಲದೇ ಸದ್ಗುರು ಅವರ ಆರೋಗ್ಯದ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಕ್ರೀಡಾ ಹಾಗೂ ಯುವ ಸಬಲೀಕರಣ ಇಲಾಖೆಯ ಹೊಣೆ ಹೊತ್ತಿರುವ ಅವರು ಸುಮ್ಮನೇ ಉಪದೇಶಗಳನ್ನು ಕೊಡದೇ ತಾವು ಸ್ವತಃ ನುಡಿದಂತೆ ನಡೆದು ಇತರರಿಗೆ ಮಾದರಿಯಾಗಿದ್ದಾರೆ. ಕಿರಣ ರಿಜುಜು ಅವರು ಹಿಮಾಚಲ ಪ್ರದೇಶ ಮೂಲದ 49 ವಯಸ್ಸಿನ ರಾಜಕಾರಣಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net