

ನವದೆಹಲಿ: ಬ್ರೆಡ್ ಎಂದರೆ ಸಾಕು ಮೊದಲು ನಮಗೆ ನೆನಪಾಗುವುದೇ ಬೇಕರಿ. ಬ್ರೆಡ್ನಿಂದ ಮಾಡುವ ವಿವಿಧ ತಿಂಡಿ, ತಿನಿಸುಗಳನ್ನು ನಮ್ಮ ಬಾಲ್ಯಗಳಲ್ಲಿ ಅಧಿಕವಾಗಿಯೇ ಸೇವನೆ ಮಾಡಿದ್ದೇವೆ. ಮೈದಾ ಹಿಟ್ಟಿನಲ್ಲಿ ಮಾಡಿರುವ ಬ್ರೆಡ್ ಬೆಳಗ್ಗಿನ ಟೀ ಜತೆಗೆ ಸೇವಿಸಲು ಅನೇಕರು ಇಂದಿಗೂ ಬಯಸುತ್ತಾರೆ.
ಮೈದಾ ಬ್ರೆಡ್ ಸೇರಿದಂತೆ ಗೋಧಿ, ಡ್ರೈಫ್ರೂಟ್, ಸಿರಿಧಾನ್ಯಗಳ ಬ್ರೆಡ್ಗಳು ಮಾರುಕಟ್ಟೆಯಲ್ಲಿ ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಇತ್ತೀಚಿನ ದಿನಗಳಲ್ಲಂತೂ ಹೋಟೆಲ್ ಸೇರಿದಂತೆ ಹಲವು ಉದ್ಯಮಗಳು ಬ್ರೆಡ್ ಅನ್ನು ಅಧಿಕವಾಗಿ ಬಳಕೆ ಮಾಡುತ್ತಿದ್ದು, ಜಗತ್ತಿನಲ್ಲಿ ಯಾವ ದೇಶಗಳು ಬ್ರೆಡ್ ಬಳಕೆಯಲ್ಲಿ ಮುಂದಿದೆ ಮತ್ತು ಹಿಂದಿದೆ ಎಂಬುದರ ಮಾಹಿತಿಯನ್ನು 'ವರ್ಲ್ಡ್ ಆಫ್ ಸ್ಟಾಟಸ್ಟಿಕ್ಸ್' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಆಯಾ ದೇಶಗಳ ವಾರ್ಷಿಕ ತಲಾವಾರು ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಕಂಡತಿದೆ:
ಭಾರತ: 1.75 ಕೆಜಿ
ನೈಜೀರಿಯಾ: 2.26 ಕೆಜಿ
ಬ್ರೆಜಿಲ್: 2.88 ಕೆಜಿ
ಇಂಡೋನೇಷ್ಯಾ: 4.7 ಕೆಜಿ
ಚೀನಾ: 5.83 ಕೆಜಿ
ಯುಎಸ್ಎ: 17 ಕೆಜಿ
ದಕ್ಷಿಣ ಆಫ್ರಿಕಾ: 25.8 ಕೆಜಿ
ಜಪಾನ್: 28.3 ಕೆಜಿ
ಮೆಕ್ಸಿಕೋ: 33.5 ಕೆಜಿ
ಯುಕೆ: 37 ಕೆಜಿ
ಸೌದಿ ಅರೇಬಿಯಾ: 39 ಕೆಜಿ
ಸ್ಲೊವೇನಿಯಾ: 39 ಕೆಜಿ
ಇಟಲಿ: 44 ಕೆಜಿ
ಆಸ್ಟ್ರಿಯಾ: 46 ಕೆಜಿ
ಸ್ಪೇನ್: 46 ಕೆಜಿ
ಬೆಲ್ಜಿಯಂ: 47 ಕೆಜಿ
ಸ್ವಿಟ್ಜರ್ಲೆಂಡ್: 48 ಕೆಜಿ
ಫ್ರಾನ್ಸ್: 50 ಕೆಜಿ
ನಾರ್ವೆ: 52 ಕೆಜಿ
ರಷ್ಯಾ: 54 ಕೆಜಿ
ಸ್ವೀಡನ್: 54 ಕೆಜಿ
ಲಕ್ಸೆಂಬರ್ಗ್: 55 ಕೆಜಿ
ಫಿನ್ಲ್ಯಾಂಡ್: 55 ಕೆಜಿ
ಜರ್ಮನಿ: 57 ಕೆಜಿ
ನೆದರ್ಲ್ಯಾಂಡ್ಸ್: 60 ಕೆಜಿ
ಹಂಗೇರಿ: 60 ಕೆಜಿ
ಐರ್ಲೆಂಡ್: 68 ಕೆಜಿ
ಗ್ರೀಸ್: 70 ಕೆಜಿ
ಡೆನ್ಮಾರ್ಕ್: 70 ಕೆಜಿ
ಪೋಲೆಂಡ್: 70 ಕೆಜಿ
ಪೋರ್ಚುಗಲ್: 70 ಕೆಜಿ
ಅರ್ಜೆಂಟೀನಾ: 72 ಕೆಜಿ
ಸೈಪ್ರಸ್: 74 ಕೆಜಿ
ಉಕ್ರೇನ್: 88 ಕೆಜಿ
ಬಲ್ಗೇರಿಯಾ: 131.1 ಕೆಜಿ
ಸೆರ್ಬಿಯಾ: 135 ಕೆಜಿ
ಟರ್ಕಿ: 199.6 ಕೆಜಿ (ಏಜೆನ್ಸೀಸ್).