ಬ್ರೈಲ್​ ಲಿಪಿಯಲ್ಲಿಯೂ ಎಕ್ಸಾಮ್​ ವಾರಿಯರ್​ ಬಿಡುಗಡೆ; ಟ್ವೀಟರ್​ನಲ್ಲಿ ಪ್ರಧಾನಿ ಮೋದಿ ಸಂತಸ

Modi 12 Dec 19
Published on

ನವದೆಹಲಿ: ಸದಾ ಹೊಸತನಕ್ಕೆ ತುಡಿಯುವ ಪ್ರಧಾನಿ ಮೋದಿ ಅವರಿಂದ ಇನ್ನೊಂದು ಹೊಸ ಪ್ರಯತ್ನ ನಡೆದಿದೆ.

ವಿದ್ಯಾರ್ಥಿಗಳೊಂದಿಗೆ ತಾವೂ ಮಕ್ಕಳಾಗಿ ಹೋಗುವ ಪ್ರಧಾನಿ ಮೋದಿ ಅವರು ವಿದ್ಯಾರ್ಥಿಗಳಿಗೆ ಸದಾ ಸ್ಪೂರ್ತಿ ತುಂಬುವ ಮಾತನಾಡುತ್ತಾರೆ.

ಇನ್ನು ಮಕ್ಕಳ ಪರೀಕ್ಷೆಗಳ ಸಮಯ ಆರಂಭವಾಗುತ್ತಿದೆ. ಅದಕ್ಕಾಗಿ "ಎಕ್ಸಾಮ್​ ವಾರಿಯರ್​" ಎಂಬ ಪುಸ್ತಕವೂ ಪ್ರಕಟಗೊಂಡಿದೆ. ಈಗ ಈ ಪುಸ್ತಕ ಬ್ರೈಲ್​ ಲಿಪಿಯಲ್ಲೂ ಲಭ್ಯವಿದೆ.

ಈ ಮಾಹಿತಿಯನ್ನು ಟ್ವೀಟರ್​ನಲ್ಲಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ನಾವು ವಿಶ್ವ ಬ್ರೈಲ್​ ದಿನಾಚರಣೆ ಮಾಡಿದ್ದೇವೆ. ​ ಅಂಧ ಮತ್ತು ಮಧ್ಯಮ ದೃಷ್ಟಿ ಇರುವ ಮಕ್ಕಳ ಬಗ್ಗೆ ನಮ್ಮ ಬದ್ಧತೆ ಹೀಗೆ ಮುದುವರಿಯುವ ಭರವಸೆ ನೀಡುತ್ತೇನೆ ಎಂದು ಟ್ವಿಟ್​ನಲ್ಲಿ ತಿಳಿಸಿದ್ದಾರೆ.

ಜತೆಗೆ ಎಕ್ಸಾಮ್​ ವಾರಿಯರ್​ ಪುಸ್ತಕವನ್ನು ಬ್ರೈಲ್​ ಲಿಪಿಯಲು ನಿಮಗೆಲ್ಲ ಪರಿಚಯಿಸಲು ಸಂತಸವಾಗುತ್ತದೆ ಎಂದು ಹೇಳಿರುವ ಪ್ರಧಾನಿ, "ಹ್ಯಾಪಿ ಸ್ಟಡಿಯಿಂಗ್​" ಎಂದು ವಿಶ್​ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net