

ನವದೆಹಲಿ: ವಿಶ್ವ ರಕ್ತದಾನಿಗಳ ದಿನವು ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಪ್ರಾಥಮಿಕ ಉದ್ದೇಶದೊಂದಿಗೆ ಜೂನ್ 14 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ವರ್ಷವು ವಿಶ್ವ ರಕ್ತದಾನಿಗಳ ದಿನದ ಆಚರಣೆಯ ಹೊಣೆಯನ್ನು ಅಲ್ಜೀರಿಯಾ ದೇಶವು ಹೊತ್ತಿದೆ. ಈ ದಿನದ ಇತಿಹಾಸ ಮತ್ತು ದಿನದ ಮಹತ್ವ ಬಗ್ಗೆ ತಿಳಿಯೋಣ....
2023ರ ವಿಶ್ವ ರಕ್ತದಾನಿಗಳ ದಿನದʼರಕ್ತ ಹಂಚಿಕೊಳ್ಳಿ, ಪ್ಲಾಸ್ಮಾ ಹಂಚಿಕೊಳ್ಳಿ, ಜೀವನವನ್ನು ಹಂಚಿಕೊಳ್ಳಿ, ಆಗಾಗ ರಕ್ತದಾನ ಮಾಡಿʼ ಎಂಬುದಾಗಿದೆ.
ವಿಶ್ವ ರಕ್ತದಾನಿಗಳ ದಿನ 2023ರ ಥೀಮ್ :
ವಿಶ್ವ ರಕ್ತದಾನಿಗಳ ದಿನದ ಮಹತ್ವ : ಪ್ರಪಂಚದಾದ್ಯಂತ ಜೀವಗಳನ್ನು ಉಳಿಸಲು ರಕ್ತದಾನ ಅತ್ಯಗತ್ಯವಾಗಿದೆ. ಅನಾರೋಗ್ಯ ಸಮಯದಲ್ಲಿ ತಕ್ಷಣ ರಕ್ತದ ಅವಶ್ಯಕತೆಯನ್ನು ಸೃಷ್ಟಿಸುತ್ತವೆ. ವಿಶ್ವ ರಕ್ತದಾನಿಗಳ ದಿನವು, ಜೀವಗಳನ್ನು ಉಳಿಸಲು ಮತ್ತು ವೈದ್ಯಕೀಯ ಚಿಕಿತ್ಸೆ ಮತ್ತು ಕಾರ್ಯವಿಧಾನಗಳಿಗೆ ಸಹಾಯ ಮಾಡುತ್ತದೆ. ಈ ದಿನದಲ್ಲಿ ಸ್ವಯಂಪ್ರೇರಿತ ರಕ್ತದಾನ ಮಾಡುವವರನ್ನು ಪ್ರೋತ್ಸಾಹಿಸಲುವ ಗುರಿಯನ್ನು ಹೊಂದಿದೆ.
ಕಾರ್ಲ್ ಲ್ಯಾಂಡ್ಸ್ಟೈನರ್ ಅವರು ಎಬಿಒ ರಕ್ತದ ಗುಂಪಿನ ವ್ಯವಸ್ಥೆಯನ್ನು ಕಂಡು ಹಿಡಿದಿರುವ ಕಾರಣ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದರು. 2004ರಲ್ಲಿ ಮೊದಲ ಬಾರಿ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗಿತ್ತು. ನಂತರ 2005ರಲ್ಲಿ 58ನೇ ವಿಶ್ವ ಆರೋಗ್ಯ ಸಂಸ್ಥೆಯ ಸಾಮಾನ್ಯ ಸಭೆಯು ಇದನ್ನು ವಾರ್ಷಿಕ ಜಾಗತಿಕ ಕಾರ್ಯಕ್ರಮವಾಗಿ ಹೆಸರಿಸಿತು ಹಾಗೂ ಜಾಗತಿಕ ಮಟ್ಟದಲ್ಲಿ ಆಚರಿಸಲು ಕರೆ ಕೊಟ್ಟಿದೆ.
ವಿಶ್ವ ರಕ್ತದಾನಿಗಳ ದಿನದ ಇತಿಹಾಸ:
ರಾಷ್ಟ್ರೀಯ ರಕ್ತ ದಿನದ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಕೆಲಸ ಮಾಡಿ ಜನಸಾಮಾನ್ಯರಿಗೆ ರಕ್ತದಾನದ ಕುರಿತಾಗಿ ತಿಳುವಳಿಕೆ ನೀಡಿ.
ರಕ್ತದಾನದ ಪಾತ್ರದ ಕುರಿತು ಜನರಿಗೆ ತಿಳುವಳಿಕೆ ನೀಡಬೇಕು.
ಪ್ರಪಂಚದ ಎಲ್ಲಾ ದೇಶಗಳಲ್ಲಿ ಸುರಕ್ಷಿತ ರಕ್ತ ಪೂರೈಕೆಯನ್ನು ನಿರ್ಮಿಸಲು ಕೆಲಸ ಮಾಡಿ
ಉತ್ತಮ ಆರೋಗ್ಯ ಹೊಂದಿರುವ ಜನರು ನಿಯಮಿತವಾಗಿ ರಕ್ತದಾನ ಮಾಡಲು ಪ್ರೋತ್ಸಾಹಿಸಿ.