

ನವದೆಹಲಿ: ಹೂಡಿಕೆ ಮತ್ತು ದೇಶೀಯ ಬೇಡಿಕೆಯ ನೆರವಿನಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ. 6.3ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ. ವಿಶ್ವಬ್ಯಾಂಕ್ ವರದಿಯ ಪ್ರಕಾರ, ಭಾರತದ ಆರ್ಥಿಕ ಚೇತರಿಕೆ ಮುಂದುವರಿಯಲಿದೆ ಎಂದು ಹೇಳಲಾಗಿದೆ.
ಹಣದುಬ್ಬರ, ಆಹಾರದ ಬೆಲೆಗಳು ಕ್ರಮೇಣ ಕಡಿಮೆಯಾಗುವ ನಿರೀೆಯಿದೆ. ಸರ್ಕಾರದ ಕ್ರಮಗಳು ಪ್ರಮುಖ ಸರಕುಗಳ ಪೂರೈಕೆಯನ್ನು ಹೆಚ್ಚಿಸಲು ಸಹಾಯ ಮಾಡಲಿವೆ. ವಿಶ್ವದ ಯಾವುದೇ ಅಭಿವೃದ್ಧೀಶಿಲ ರಾಷ್ಟ್ರಕ್ಕಿಂತ ಭಾರತ ಹೆಚ್ಚಿನ ಪ್ರಗತಿ ಸಾಧಿಸುವ ನಿರೀಕ್ಷೆ ಇದೆ. ಆದರೆ ನಿರೀತ ಅಭಿವೃದ್ಧಿ ಗುರಿಗಳನ್ನು ಪೂರೈಸುವ ಸಾಧ್ಯತೆ ಕಡಿಮೆ ಎಂದು ವರದಿ ಹೇಳಿದೆ.
ಇತರ ಉದಯೋನ್ಮುಖ ಮಾರುಕಟ್ಟೆ ಮತ್ತು ಅಭಿವೃದ್ಧೀಶಿಲ ಆರ್ಥಿಕತೆಗಳ ಬೆಳವಣಿಗೆ ಮುಂದುವರಿಯುವ ನಿರೀಕ್ಷೆ ಇದೆ. ಹೂಡಿಕೆಯ ಮೇಲಿನ ವಿತ್ತೀಯ ನೀತಿಯ ಬಿಗಿಗೊಳಿಸುವಿಕೆಯ ಪರಿಣಾಮ ಮುಂಬರುವ ವರ್ಷದಲ್ಲಿ ಉತ್ತಮ ಫಲ ನೀಡಲಿದೆ ಎಂದು ವರದಿ ಹೇಳಿದೆ.