

ರಾಣೆಬೆನ್ನೂರ: ಎಚ್‌ಐವಿ ಕಾಯಿಲೆಗೆ ತುತ್ತಾದವರನ್ನು ಕೀಳಿರಿಮೆಯಿಂದ ಕಾಣದೆ ಅವರಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದು ಐಸಿಟಿಸಿಎ ಮುಖ್ಯಸ್ಥ ಎಂ. ರಾಮನಗೌಡ ಹೇಳಿದರು.
ಸ್ಥಳೀಯ ಆರ್‌ಟಿಇಎಸ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜಿಲ್ಲಾ ಆರೋಗ್ಯ ಮತ್ತ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ವತಿಯಿಂದ ಗುರುವಾರ ಏರ್ಪಡಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಎಚ್‌ಐವಿಯಂತಹ ಪಿಡುಗನ್ನು ಹೊಗಲಾಡಿಸುವಲ್ಲಿ ಹಿನ್ನಡೆಯನ್ನುಂಟು ಮಾಡುತ್ತಿದೆ. ಕಳೆದ ನಾಲ್ಕು ದಶಕಗಳ ನಿರಂತರ ಪ್ರಯತ್ನದಿಂದಲೂ ಸಹ ನಾವು ಅಸಮಾನತೆಯನ್ನು ಕೊನೆಗಾಣಿಸಲು ಸಾಧ್ಯವಾಗಿರುವುದಿಲ್ಲ. ಇದನ್ನು ನಿಯಂತ್ರಣ ಮಾಡಲು ಪ್ರತಿಯೊಬ್ಬರೂ ಜಾಗ್ರತಿವಹಿಸಬೇಕು ಎಂದರು.
ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸೀತಾ ಕೋಟಿ ಅಧ್ಯಕ್ಷತೆ ವಹಿಸಿದ್ದರು.
ಪ್ರಾಚಾರ್ಯ ಸಿ.ಎ. ಹರಿಹರ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ಸರಸ್ವತಿ ಬಮ್ಮನಾಳ, ಸೌಂದರ್ಯ ಪಾಟೀಲ, ಭರತ ಎಚ್. ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.