ಪರಸ್ಪರ ನಂಬಿಕೆಯಡಿ ಹಣಕಾಸು ಸಂಸ್ಥೆಗಳ ಕಾರ್ಯ

4sor8
ಚಂದ್ರಗುತ್ತಿಯಲ್ಲಿ ಶ್ರೀ ರೇಣುಕಾದೇವಿ ಮುಧೋಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಉದ್ಘಾಟಿಸಿದರು. ನಾಗರಾಜ ಡಿ.ಸಿರ್ಸಿಕರ್, ಎಚ್.ಗಣಪತಿ ಹುಲ್ತಿಕೊಪ್ಪ, ಸರಿತಾ ಕೃಷ್ಣಪ್ಪ, ಜಯಶೀಲ ಗೌಡ, ರಾಘವೇಂದ್ರ ಡಿ.ನಾಯ್ಕ ಇತರರಿದ್ದರು.
Published on

ಸೊರಬ: ಸಹಕಾರ ಮನೋಭಾವ, ಪರಸ್ಪರ ನಂಬಿಕೆಯಡಿ ಹಣಕಾಸು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಬದುಕಿಗೆ ಹಣಕಾಸಿನ ವ್ಯವಸ್ಥೆ ಅತ್ಯವಶ್ಯಕ ಎಂದು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬ ಕಲ್ಯಾಣ ಮಂಟಪದಲ್ಲಿ ಶ್ರೀ ರೇಣುಕಾದೇವಿ ಮುಧೋಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಐತಿಹಾಸಿಕ, ಪೌರಾಣಿಕ ಹಿನ್ನೆಲೆ ಇರುವ ಚಂದ್ರಗುತ್ತಿ ಕ್ಷೇತ್ರದಲ್ಲಿ ಹಣಕಾಸು ಸಂಸ್ಥೆ ಆರಂಭವಾಗುತ್ತಿರುವುದು ಉತ್ತಮ ಬೆಳವಣಿಗೆ. ರೈತರು, ಉದ್ದಿಮೆದಾರರು, ವರ್ತಕರು ಹಾಗೂ ಸಾರ್ವಜನಿಕರ ವೃತ್ತಿ ಅಭಿವೃದ್ಧಿಗೆ ಹಣಕಾಸು ವ್ಯವಸ್ಥೆ ಅಗತ್ಯವಿದೆ ಎಂದು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಆರಂಭವಾಗುತ್ತಿರುವ ಸಂಸ್ಥೆ ಆದರ್ಶವಾಗಿರಬೇಕು. ಸದಸ್ಯರು ವ್ಯವಸ್ಥೆ ಸದ್ಭಳಕೆ ಮಾಡಿಕೊಂಡು ಉನ್ನತಿ ಹೊಂದಬೇಕು. ಸಂಘದ ಬೆಳವಣಿಗೆಗೆ ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಶ್ರೀ ಮಹಾಂತ ಸ್ವಾಮೀಜಿ ಜಡೆ ಸಂಸ್ಥಾನ ಮಠ

ತಾಪಂ ಮಾಜಿ ಸದಸ್ಯ ಎಚ್.ಗಣಪತಿ ಹುಲ್ತಿಕೊಪ್ಪ ಮಾತನಾಡಿ, ಹಣಕಾಸು ಸಂಸ್ಥೆಯಲ್ಲಿ ಉತ್ತಮ ಸೇವೆ ಒದಗಿಸಬೇಕು. ಖಾಸಗಿ ಲೇವಾದೇವಿ ವ್ಯವಹಾರಕ್ಕೆ ಸಹಕಾರ ಕ್ಷೇತ್ರದಿಂದ ಕಡಿವಾಣ ಹಾಕಲು ಸಾಧ್ಯವಿದೆ. ಸಂಸ್ಥೆಯು ಹಣಕಾಸು ವಹಿವಾಟು ಆರಂಭದ ನಂತರ ಸದಸ್ಯರಲ್ಲಿಯೂ ಗೌರವಯುತ ಬದುಕು ಕಾಣುವಂತಾಗಬೇಕು. ಸದಸ್ಯರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ ಸಂಸ್ಥೆ ಉನ್ನತಿ ಕಾಣಲು ಸಾಧ್ಯ ಎಂದರು.

ಶ್ರೀ ರೇಣುಕಾದೇವಿ ಮುಧೋಳ ಕ್ರೆಡಿಕ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ನಾಗರಾಜ ಡಿ.ಸಿರ್ಸಿಕರ್ ಮಾತನಾಡಿ, ಜನತೆಗೆ ಅನುಕೂಲ ಕಲ್ಪಿಸಲು, ಹಣಕಾಸಿನ ವ್ಯವಹಾರ ಕೈಗೊಳ್ಳುವ ಉದ್ದೇಶದಿಂದ ಸಂಸ್ಥೆ ಆರಂಭಿಸಲಾಗಿದೆ. ಸಮಾನ ಮನಸ್ಕರು ಒಗ್ಗೂಡಿದ್ದರಿಂದ ಹಣಕಾಸು ಸಂಸ್ಥೆ ಆರಂಭವಾಯಿತು. ಉತ್ತಮ ವಹಿವಾಟು ನಡೆಸಿ ಮಾದರಿ ಸಂಸ್ಥೆಯನ್ನಾಗಿಸಲಾಗುವುದು ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜಯಶೀಲ ಗೌಡ, ಸೊಸೈಟಿ ಉಪಾಧ್ಯಕ್ಷ ರಾಘವೇಂದ್ರ ಡಿ.ನಾಯ್ಕ, ಪ್ರಮುಖರಾದ ವಿನಾಯಕ ಸಿ.ನಾಯ್ಕ, ಧನಂಜಯ್ ಡಿ.ನಾಯ್ಕ, ಎನ್.ಜಿ.ನಾಗರಾಜ್, ಮಂಜುನಾಥ್ ಶೆಣೈ, ಈಶ್ವರ ಚನ್ನಪಟ್ಟಣ, ಮಾರ‌್ಯಪ್ಪ ಬೆನ್ನೂರು, ಉಮಾಪತಿ, ಪ್ರಶಾಂತ್ ಶೇಟ್, ಸೊಸೈಟಿ ನಿರ್ದೇಶಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net