

ಹೊಸನಗರ: ಪೌರ ಕಾರ್ಮಿಕರು ಕೆಲಸದ ಜತೆಗೆ ವೈಯಕ್ತಿಕ ಆರೋಗ್ಯದ ಮೇಲೆ ಗಮನ ವಹಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಪೌರ ಕಾರ್ಮಿಕರು ದುಶ್ಚಟಗಳ ದಾಸರಾಗದೆ ಆರೋಗ್ಯವಂತ ಜೀವನ ಸಾಗಿಸಬೇಕು. ಕಾರ್ಮಿಕರ ಹಿತ ಕಾಪಾಡಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.
ಪಪಂ ಅಧ್ಯಕ್ಷ ನಾಗಪ್ಪ ಮಾತನಾಡಿ, ಪೌರ ಕಾರ್ಮಿಕ ವರ್ಗವು ಪಟ್ಟಣದ ನೈರ್ಮಲ್ಯ ಕಾಪಾಡಿ ಜನರ ಆರೋಗ್ಯ ಕಾಪಾಡುತ್ತದೆ ಎಂದರು. ಕಾರ್ಮಿಕ ಕುಟುಂಬಗಳಿಗೆ ಉಡುಗೊರೆ ನೀಡಿ ಸನ್ಮಾನಿಸಲಾಯಿತು. ಉಪಾಧ್ಯಕ್ಷೆ ಚಂದ್ರಕಲಾ, ಸದಸ್ಯರಾದ ಸಿಂಥಿಯಾ ಸೆರಾವೋ, ಅಶ್ವಿನಿ ಕುಮಾರ್, ಶಾಹಿನಾ ನಾಸೀರ್, ಗುರುರಾಜ್, ಕೃಷ್ಣವೇಣಿ, ಗುಲಾಬಿ, ನಾಮ ನಿರ್ದೇಶಿತ ಸದಸ್ಯ ಕೆ.ಎಸ್.ಗುರುರಾಜ್, ಎಚ್.ಎಂ.ನಿತ್ಯಾನಂದ, ನೇತ್ರಭಟ್, ಮುಖ್ಯಾಧಿಕಾರಿ ಉಮೇಶ್ ಎಸ್.ಗುಡ್ಡದ್, ಸಿಬ್ಬಂದಿ ಬಸವರಾಜ್, ಉಮಾಶಂಕರ್, ಆಸ್ಮಾ, ನೇತ್ರಾವತಿ, ಗಿರೀಶ್, ಪರಶುರಾಮ ಇತರರಿದ್ದರು.