ಕಾರ್ವಿುಕರಿಗೆ ಇನ್ನು ದಿನಕ್ಕೆ 10 ಗಂಟೆ ಕೆಲಸ

Davanagere Visakhapatnam, Disaster, Harihara, Polyfibers Factory. kargil factory,
Published on

ಬೆಂಗಳೂರು: ಕಾರ್ಖಾನೆ ಕಾರ್ವಿುಕರ ಕೆಲಸದ ಅವಧಿಯನ್ನು ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ. ಕೋವಿಡ್-19 ಕಾರಣ ನಷ್ಟ ಭರ್ತಿ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಕಾರ್ವಿುಕರ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಿಸಬೇಕು ಎಂದು ಕಾರ್ಖಾನೆ ಮಾಲೀಕರು ಸರ್ಕಾರದ ಮೇಲೆ ಒತ್ತಡ ತಂದಿದ್ದರು.

ಆದರೆ, ಸರ್ಕಾರ ದಿನಕ್ಕೆ 10 ಗಂಟೆ, ವಾರಕ್ಕೆ 60 ಗಂಟೆ ಕೆಲಸದ ಅವಧಿ ನಿಗದಿಪಡಿಸಿದೆ. ಈ ಆದೇಶ ಮೇ 22ರಿಂದ ಆಗಸ್ಟ್ 21ರ ವರೆಗೆ ಅನ್ವಯವಾಗಲಿದೆ. ಫ್ಯಾಕ್ಟರಿ ಕಾಯ್ದೆ 1948ರ ಅಡಿ ನೋಂದಣಿಯಾದ ಕಾರ್ಖಾನೆಗಳಿಗೆ ಈ ಆದೇಶ ಅನ್ವಯವಾಗುತ್ತದೆ. ಓವರ್ ಟೈಮ್ ಕೂಲಿ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಮೊದಲು ಕೆಲಸದ ಅವಧಿ ದಿನಕ್ಕೆ 8 ಗಂಟೆ, ವಾರಕ್ಕೆ 48 ಗಂಟೆ ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net