ಅರಕಲಗೂಡು: ತಾಲೂಕಿನ ರಾಮನಾಥಪುರ ಹೊಗೆಸೊಪ್ಪು ಮಾರುಕಟ್ಟೆಯ ಛಾವಣಿಗೆ ಕೂಲಿಂಗ್ ಶೀಟ್ ಅಳವಡಿಸುತ್ತಿದ್ದ ವೇಳೆ ಕಾರ್ಮಿಕನೊಬ್ಬ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಿಹಾರ ಮೂಲದ ಅಬ್ಬಾಸ್ ಅಲೀಂ (30) ಮೃತ ಕಾರ್ಮಿಕ. ಈತ ಮಾರುಕಟ್ಟೆಯ ಛಾವಣಿಯ ಕೂಲಿಂಗ್ ಶೀಟ್ ಅಳವಡಿಸುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.