

ನವದೆಹಲಿ: "ಚಮ್ಮಕ್ ಚಲ್ಲೋ" ಹಾಡು ಇಂಟರ್ನೆಟ್ನಲ್ಲಿ ಯಾವಾಗಲೂ ಟ್ರೆಂಡಿಂಗ್ನಲ್ಲಿರುತ್ತದೆ. ಎಲ್ಲರೂ ಈ ಹಾಡಿನ ಡ್ಯಾನ್ಸ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿರುತ್ತಾರೆ. ಇದೀಗ ಈ ಹಾಡಿನ ವಿಡಿಯೋ ಮತ್ತೆ ವೈರಲ್ ಆಗಿದೆ. ಇದರಲ್ಲಿ ಇಬ್ಬರು ಮಹಿಳೆಯರು ತಮ್ಮ ನೃತ್ಯದಿಂದ ಸಂಚಲನ ಮೂಡಿಸಿದ್ದಾರೆ. ಮಹಿಳೆಯರ ಡ್ಯಾನ್ಸ್ ನೋಡಿದವರೀಗ ಬೆರಗಾಗಿದ್ದಾರೆ. ಜೊತೆಗೆ ಅವರ ಸೌಂದರ್ಯ ಮತ್ತು ನೃತ್ಯವನ್ನು ನೋಡಿ ಕಾಮೆಂಟ್ ವಿಭಾಗದಲ್ಲಿ ಎಲ್ಲರೂ ಹೊಗಳಿದ್ದಾರೆ.
ಬಾಲಿವುಡ್ನ "ಚಮ್ಮಕ್ ಚಲ್ಲೋ" ಹಾಡಿಗೆ ಇಬ್ಬರು ಮಹಿಳೆಯರು ಅದ್ಭುತವಾದ ನೃತ್ಯ ಮಾಡುತ್ತಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಕಂಡುಬರುತ್ತದೆ. ಅವರ ಡ್ಯಾನ್ಸ್ ನೋಡಿದರೆ ಕರೀನಾ ಕಪೂರ್ ಕೂಡ ಒಮ್ಮೆ ಶಾಕ್ ಆಗಬಹುದು. ಹಾಡಿನಲ್ಲಿ ಒಂದೊಂದು ಡ್ಯಾನ್ಸ್ ಮೂವ್ ಸಹ ತೋರಿಸಿದ್ದು, ಪ್ರತಿ ಸ್ಟೆಪ್ಸ್ ಅನ್ನು ಚೆನ್ನಾಗಿ ಹಿಂಬಾಲಿಸಿದ್ದಾರೆ. ವಿಡಿಯೋದಲ್ಲಿ ಮಹಿಳೆಯರಿಬ್ಬರೂ ಸೀರೆ ಉಟ್ಟುಕೊಂಡು ನೃತ್ಯ ಮಾಡಿದ್ದು, ಅವರ ಕಿಲ್ಲರ್ ಸ್ಟೈಲ್ಗೆ ಎಲ್ಲರೂ ಮನಸೋತಿದ್ದಾರೆ. ಈ ಹಾಟ್ ಸೀರೆ ಅವತಾರದಲ್ಲಿ ಜನರು ಸದ್ಯ ಕೆಂಪು ದಿರಿಸು ಧರಿಸಿರುವ ಮಹಿಳೆಯನ್ನು ಇಷ್ಟಪಡುತ್ತಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಹಂಚಿಕೊಳ್ಳಲಾಗಿದ್ದು, ಸುದ್ದಿ ಬರೆಯುವವರೆಗೂ ಇದನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ ಮತ್ತು ಇಷ್ಟಪಟ್ಟಿದ್ದಾರೆ. ಈ ಬಾಬಿ ಡ್ಯಾನ್ಸ್ ಬಳಕೆದಾರರ ಗಮನ ಸೆಳೆದಿದ್ದು, ಬಳಕೆದಾರರು ಕಾಮೆಂಟ್ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ನಿರಂತರವಾಗಿ ನೀಡುತ್ತಿದ್ದಾರೆ. ಒರ್ವ ಬಳಕೆದಾರರು...ಒಂದೇ ಮನೆಯಲ್ಲಿ ಅನೇಕ ಪ್ರತಿಭಾವಂತ ಮತ್ತು ಸುಂದರ ಜನರು ಇದ್ದಾರೆ ಎಂದರೆ ಮತ್ತೊಬ್ಬರು...ಬಾಬಿಯ ಈ ಡ್ಯಾನ್ಸ್ ವೀಡಿಯೋವನ್ನು ನೋಡಿದ ನಂತರ ಚಳಿಗಾಲದ ಚಳಿ ಹಾರಿಹೋಯ್ತು ಎಂದಿದ್ದಾರೆ.