ಮಹಿಳೆ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ : ಬಿಡದಿ ಪುರಸಭೆ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ

8 RMN-MGD P2
Published on

ಬಿಡದಿ : ಪುರಸಭೆ ಮಹಿಳಾ ಪೌರ ಕಾರ್ಮಿಕರ ಜತೆ ಸದಸ್ಯರು, ಅಧಿಕಾರಿ ವೃಂದದವರು ಕೇಕ್ ಕತ್ತರಿಸಿ ವಿಶ್ವ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದರು.

ಬಿಡದಿ ಪುರಸಭೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಎಂಎಲ್‌ಸಿ ಸಿ.ಎಂ. ಲಿಂಗಪ್ಪ ಶುಭಾಶಯ ಕೋರಿ ಮಾತನಾಡಿದರು.

ಮಹಿಳೆ ಕುಟುಂಬದ ಜವಾಬ್ದಾರಿ ಹೊರುವ ಜತೆಗೆ ಕೃಷಿಯಲ್ಲೂ ತೊಡಗಿಸಿಕೊಂಡು ಪುರುಷನಿಗಿಂತ ಹೆಚ್ಚು ದುಡಿಮೆ ಮಾಡುತ್ತಿದ್ದಾಳೆ. ಸಮಾಜದಲ್ಲಿ ಹೆಣ್ಣಿಗೆ ಪೂಜ್ಯ ಸ್ಥಾನ ನೀಡಲಾಗಿದೆ. ಆದರೂ ಆಕೆಯ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಇದು ಉತ್ತಮ ಬೆಳೆವಣಿಗೆಯಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಪಾಶ್ಚಿಮಾತ್ಯ ದೇಶಗಳಲ್ಲಿ ಹೆಣ್ಣು ಮತ್ತು ಗಂಡು ಸ್ನೇಹಿತರಂತೆ ಇರುತ್ತಾರೆ. ನಮ್ಮಲ್ಲಿ ಇತ್ತೀಚೆಗೆ ಮೊಬೈಲ್‌ನಿಂದ ಹೆಚ್ಚು ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ. ಮಹಿಳೆಯರಿಗೆ ಗಂಡಿಗೆ ಸಮಾನವಾದ ಸ್ಥಾನ ನೀಡುವ ಚಿಂತನೆ ಸಹ ನಡೆಯುತ್ತಿದೆ. ಮಹಿಳೆ ತನ್ನ ಮೇಲಾಗುವ ದೌರ್ಜನ್ಯಗಳಿಂದ ಹೊರ ಬರಲು ಪ್ರಯತ್ನಿಸುತ್ತಿದ್ದಾಳೆ.

ಇಂತಹ ಸಮಯದಲ್ಲಿ ನಾವೆಲ್ಲರೂ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುವ ವಾತಾವರಣ ಸೃಷ್ಟಿಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಪುರಸಭಾ ಸದಸ್ಯ ಬಿ.ಎಂ. ರಮೇಶ್‌ಕುಮಾರ್ ಮಾತನಾಡಿ ಪೌರಕಾರ್ಮಿಕ ಹೆಣ್ಣು ಮಕ್ಕಳು, ಸದಸ್ಯರು ಮಹಿಳಾ ಅಧಿಕಾರಿಗಳು ಅರ್ಥಪೂರ್ಣವಾಗಿ ಮಹಿಳಾ ದಿನಾಚರಣೆ ಮಾಡುತ್ತಿರುವುದು ಉತ್ತಮವಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸಿದ್ದರೆ ಮಹಿಳಾ ದಿನಾಚರಣೆ ಸಾರ್ಥಕವಾಗುತ್ತಿತ್ತು. ಈ ನಿಟ್ಟಿನಲ್ಲಿ ಪುರಸಭೆ ಚಿಂತನೆ ನಡೆಸಲಿ ಎಂದು ಸಲಹೆ ನೀಡಿದರು.ಪುರಸಭೆ ಅಧ್ಯಕ್ಷೆ ಎ.ಸಿ. ಸರಸ್ವತಿ ರಮೇಶ್, ಉಪಾಧ್ಯಕ್ಷ ಸಿ.ಲೋಕೇಶ್ ವಿವಿಧ ಮಹಿಳೆಯರಿಗೆ ಉಡುಗೊರೆಗಳನ್ನು ನೀಡಿದರು.

ಇತಿಹಾಸ ಸೃಷ್ಟಿಸಿದ್ದೆ ಮಹಿಳೆ. ಹಾಗಾಗಿ ಸಮಾಜದ ಎಲ್ಲ ಸ್ತರಗಳಲ್ಲೂ ಮಹಿಳೆಗೆ ಹೆಚ್ಚಿನ ಅವಕಾಶ ನೀಡಿ ಗೌರವಿಸುವ ಕೆಲಸ ಆಗಬೇಕು. ಆಗ ಮಾತ್ರ ಮಹಿಳಾ ದಿನಕ್ಕೆ ಅರ್ಥ ಅರ್ಥ ಬರುತ್ತದೆ. ರೂಪಾ ಪರಿಸರ ಇಂಜಿನಿಯರ್ ಬಿಡದಿ ಪುರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net