ಹುಡ್ಗೀರು ಮೊದಲ ನೋಟದಲ್ಲೇ ಇಂಥಾ ವ್ಯಕ್ತಿಗಳ ಪ್ರೀತಿಯಲ್ಲಿ ಬೀಳ್ತಾರೆ! ಯಾವ ಗುಣ ಅವರನ್ನು ಆಕರ್ಷಿಸುತ್ತೆ ಗೊತ್ತಾ?

Love
Published on

ಮೊದಲ ನೋಟದಲ್ಲೇ ಪ್ರೀತಿ ಹುಟ್ಟುವ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಯುವತಿಯರು ತಕ್ಷಣವೇ ಕೆಲ ಯುವಕರ ಪ್ರೀತಿಯಲ್ಲಿ ಬೀಳುತ್ತಾರೆ. ಹೀಗೆ ಪ್ರೀತಿಯಲ್ಲಿ ಬೀಳಬೇಕಾದರೆ ಯಾವ ಗುಣಗಳು ಮಹಿಳೆಯರನ್ನು ಆಕರ್ಷಿಸುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

ಮೊದಲ ನೋಟದಲ್ಲೇ ಯುವತಿಯರು ಪ್ರೀತಿಯ ಬಲೆಯಲ್ಲಿ ಬೀಳುವಂತಹ ಸನ್ನಿವೇಶಗಳನ್ನು ಆಗಾಗ ಸಿನಿಮಾಗಳಲ್ಲಿ ನೋಡಿರುತ್ತೇವೆ. ಈ ಸಂಬಂಧಗಳು ಆಗಾಗ ಜಗಳದಿಂದಲೇ ಆರಂಭವಾಗುತ್ತವೆ. ಇದು ಒಂದು ಕಾರಣವಾದರೆ, ಮೊದಲ ನೋಟದಲ್ಲೇ ಪ್ರೀತಿ ಹುಟ್ಟಲು ಇನ್ನೊಂದು ಕಾರಣವಿದೆ.

ಪ್ರತಿಯೊಬ್ಬರೂ ಸಾಮಾನ್ಯವಾಗಿ ಸ್ಮಾರ್ಟ್ ಜನರ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಆದರೆ ಅತಿಯಾದ ಬುದ್ಧಿವಂತಿಕೆಯನ್ನು ಇಷ್ಟಪಡದ ಜನರು ಸಹ ಇದ್ದಾರೆ. ಸ್ಮಾರ್ಟ್‌ನೆಸ್ ಎಂಬುದು ಪುರುಷರಲ್ಲಿ ತ್ವರಿತ ಆಕರ್ಷಣೆಯ ಅಂಶವಾಗಿದೆ. ಇದರಿಂದಲೇ ಹುಡುಗಿಯರು ಈ ರೀತಿಯ ಪುರಷರ ಮೇಲೆ ಅಭಿಮಾನ, ಪ್ರೀತಿಯನ್ನು ಹೊಂದುವುದು ಸಹಜ.

ಬಾಹ್ಯ ಸೌಂದರ್ಯವು ಮಹಿಳೆಯರನ್ನು ಆಕರ್ಷಿಸುತ್ತದೆ ನಿಜ. ಆದರೆ, ಆಧುನಿಕ ಕಾಲದಲ್ಲಿ 90 ಪ್ರತಿಶತ ಮಹಿಳೆಯರು ಸೌಂದರ್ಯಕ್ಕಿಂತ ಪ್ರತಿಭೆ ಮತ್ತು ವ್ಯಕ್ತಿತ್ವಕ್ಕೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಹಾಗಂತ ಸೌಂದರ್ಯಕ್ಕೆ ಬೆಲೆ ಕೊಡುವುದಿಲ್ಲ ಅಂತಾ ಅಲ್ಲ. ಸೌಂದರ್ಯವೂ ಕೂಡ ಪ್ರೀತಿಯಲ್ಲಿ ಕೆಲವೊಮ್ಮೆ ಕಾರಣವಾಗುತ್ತದೆ. ಇದಲ್ಲದೆ, ನಿರರ್ಗಳವಾಗಿ ಮಾತನಾಡುವವರನ್ನು ಯುವತಿಯರು ಬೇಗನೆ ಇಷ್ಟಪಡುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net