ಮಹಿಳೆಯರು ಸ್ವಾವಲಂಬಿಯಾಗಿ ಬದುಕು ರೂಪಿಸಿಕೊಳ್ಳಿ

SRP_08-03jpj
ಶ್ರೀರಂಗಪಟ್ಟಣದ ಐಕ್ಯ ಅಲಯನ್ಸ್ ಸಂಸ್ಥೆಯ ಕಚೇರಿಯಲ್ಲಿ ಗುರುವಾರ ಕೆ.ಶೆಟ್ಟಹಳ್ಳಿ ಗ್ರಾಮದ ಮಹಿಳೆ ಶೈಲಜಾ ಎಂಬುವರಿಗೆ ಅಧ್ಯಕ್ಷೆ ಲಯನ್ ಸರಸ್ವತಿ ತಮ್ಮ ವೈಯಕ್ತಿಕ ಖರ್ಚಿನಲ್ಲಿ ಹೊಲಿಗೆ ಯಂತ್ರ ವಿತರಿಸಿ ಬಡಕುಟುಂಬದ ನಿರ್ವಹಣೆಗೆ ನೆರವಾದರು. ದರ್ಶನ್ ಲಿಂಗರಾಜು, ಅನುಪಮಾ ಇತರರು ಇದ್ದರು.
Published on

ಶ್ರೀರಂಗಪಟ್ಟಣ: ಮಹಿಳೆಯರು ಸ್ವಾವಲಂಬಿಯಾಗಿ ಬದುಕುವ ಆತ್ಮಭರವಸೆ ಹೊಂದುವ ಮೂಲಕ ಸಮಾಜದಲ್ಲಿ ಆರ್ಥಿಕ ಸ್ಥಿತಿಯನ್ನು ರೂಪಿಸಿಕೊಳ್ಳಬೇಕು ಎಂದು ಐಕ್ಯ ಅಲಯನ್ಸ್ ಸಂಸ್ಥೆ ಅಧ್ಯಕ್ಷೆ ಲಯನ್ ಸರಸ್ವತಿ ತಿಳಿಸಿದರು.

ಪಟ್ಟಣದ ಸಂಸ್ಥೆಯ ಕಚೇರಿಯಲ್ಲಿ ಗುರುವಾರ ಕೆ.ಶೆಟ್ಟಹಳ್ಳಿ ಗ್ರಾಮದ ಮಹಿಳೆ ಶೈಲಜಾ ಎಂಬುವರಿಗೆ ತಮ್ಮ ವೈಯಕ್ತಿಕ ಆರ್ಥಿಕ ನೆರವು ಮೂಲಕ ಬಡ ಕುಟುಂಬದ ನಿರ್ವಹಣೆಯ ಸಹಾಯಕ್ಕೆ ಹೊಲಿಗೆ ಯಂತ್ರವನ್ನು ವಿತರಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಬಡ ಮಹಿಳೆಯರು ಸ್ವಾವಲಂಬಿ ಬದುಕು ನಿರ್ಮಿಸಿಕೊಳ್ಳಲು ಸಮಾಜದಲ್ಲಿ ಮುನ್ನೆಲೆಗೆ ಬರಬೇಕು. ಜತೆಗೆ ಇಂತಹ ಮಹಿಳೆಯರಿಗೆ ಸಂಘ ಸಂಸ್ಥೆಗಳು ಹಾಗೂ ಆರ್ಥಿಕ ಸುಸ್ಥಿತಿಯಲ್ಲಿರುವವರು ತಮ್ಮ ಕೈಲಾದ ಮಟ್ಟಿಗೆ ನೆರವು ನೀಡಿ ಆ ಬಡ ಕುಟುಂಬದ ಸದಸ್ಯರೊಂದಿಗೆ ಅವರ ಜೀವನ ಸುಧಾರಣೆಗೆ ಮುಂದಾಗಬೇಕು ಎಂದರು.

ಯುವ ಮುಖಂಡ ದರ್ಶನ್ ಲಿಂಗರಾಜು ಮಾತನಾಡಿ, ಇಂತಹ ಮಹಿಳೆಯರಿಗೆ ಸಮಾಜಮುಖಿಯಾಗಿ ನೆರವಾಗುವ ಸಮಾಜ ಸೇವಕಿ ಲಯನ್ ಸರಸ್ವತಿ ಅವರ ಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಅನನ್ಯ ಹಾರ್ಟ್ ಸಂಸ್ಥೆ ಮುಖ್ಯಸ್ಥೆ ಅನುಪಮಾ, ವೆಂಕಟೇಗೌಡ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ಶ್ರೀನಿವಾಸ್, ಕಾಮಧೇನು ಸ್ತ್ರೀ ಶಕ್ತಿ ಸಹಾಯ ಸಂಘದ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ, ನಿವೃತ್ತ ಬಿಇಒ ಸುವರ್ಣಾ ದೇವಿ ಸೇರಿದಂತೆ ಐಕ್ಯ ಅಲಯನ್ಸ್ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net