

ಬೆಂಗಳೂರು: ಬೆಂಗಳೂರಿನ ಟ್ರಾಫಿಕ್‌ನಲ್ಲಿ ನಡೆಯುವ ಕೆಲವು ಘಟನೆಗಳು ಸಾಕಷ್ಟು ವೈರಲ್ ಆಗಿವೆ. ಅಂತೆಯೇ ಇಲ್ಲೊಂದು ಫೋಟೋ ನೆಟ್ಟಿಗರ ಹುಬ್ಬೇರಿಸಿದೆ. ಈ ಫೋಟೊದಲ್ಲಿ ಬೆಂಗಳೂರಿನ ಟ್ರಾಫಿಕ್ ಅನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬಹುದು ಎಂಬ ಸಂದೇಶವಿದೆ. ಈ ವೈರಲ್ ಫೋಟೊ ಕುರಿತ ಸ್ಟೋರಿ ಇಲ್ಲಿದೆ.
ಅತಿಯಾದ ಟ್ರಾಫಿಕ್ ಸದಾ ಟ್ರೋಲರ್‌ಗಳ ಬಾಯಿಗೆ ಆಹಾರವಾಗುತ್ತಲೇ ಇದೆ ಸಿಲಿಕಾನ್ ಸಿಟಿ. ಈ ನಡುವೆ ನಗರ ಟ್ರಾಫಿಕ್‌ನಲ್ಲಿ ಕೆಲ ದ್ರಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತವೆ, ಅಲ್ಲದೆ ವೈರಲ್ ಆಗುವ ಆ ದ್ರಶ್ಯಗಳು ನಿಮ್ಮಲ್ಲಿ ನಗು ತರಿಸುವ ಜೊತೆಗೆ ಹೀಗೂ ಉಂಟಾ ಅನ್ನಿಸದೇ ಇರದು.
ಟೆಕ್ಕಿಯೊಬ್ಬ ಕಿಕ್ಕಿರಿದ ಟ್ರಾಫಿಕ್‌ನಲ್ಲಿ ಬೈಕ್‌ನಲ್ಲಿ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು.
ಇದೀಗ ಪ್ರಿಯಾ ಹೆಸರಿನ ಎಕ್ಸ್(ಟ್ವಿಟ್ಟರ್) ಬಳಕೆ ದಾರರು ಹಂಚಿಕೊಂಡಿರುವ ಫೋಟೋದಲ್ಲಿ ಕಾರಿನ ಸೀಟಿನಲ್ಲಿ ಇರಿಸಲಾದ ಸಿಪ್ಪೆ ಸುಲಿದ ಬಟಾಣಿಯಫೋಟೋವನ್ನು ಅಪ್‌ಲೋಡ್ ಮಾಡಿದ್ದಾರೆ. 'ಟ್ರಾಫಿಕ್ ಜಾಮ್ ಆದಾಗ ಸಮಯದ ಸದುಪಯೋಗ' ಎಂದು ಈ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ಪ್ರಿಯಾ ಅವರು ಫೋಟೋವನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಸುಮಾರು 50,000 ವೀವ್ಸ್ ಗಳಿಸಿದೆ. ಸುಮಾರು 100 ಕಾಮೆಂಟ್ಗಳು ಬಂದಿವೆ. ನೆಟ್ಟಿಗರು ಈ ಪೋಸ್ಟ್‌ಗೆ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.
'ಸಮಯದ ಉಳಿತಾಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಂಬೈನ ಸ್ಥಳೀಯ ರೈಲುಗಳಲ್ಲಿ ಪ್ರಯಾಣದ ಸಮಯದಲ್ಲಿ ತರಕಾರಿಗಳ ಸಿಪ್ಪೆ ಸುಲಿಯುವುದು ಸಾಮಾನ್ಯ ಅಭ್ಯಾಸವಾಗಿದೆ' ಎಂದು ಮತ್ತೋರ್ವ ಬಳಕೆದಾರರು ತಿಳಿಸಿದ್ದಾರೆ. ಅಂದಹಾಗೆ ವರದಿಯೊಂದರ ಪ್ರಕಾರ ವಿಶ್ವದಲ್ಲೇ ಅತಿ ಹೆಚ್ಚು ವಾಹನ ದಟ್ಟಣೆ ಇರುವುದು ಲಂಡನ್ನಲ್ಲಾದರೆ, ಅದರ ನಂತರದ ಸ್ಥಾನವನ್ನು ಬೆಂಗಳೂರು ಪಡೆದುಕೊಂಡಿದೆ ಎನ್ನಲಾಗುತ್ತಿದೆ.
ಮುಂಬೈ ರೈಲು ಚಟುವಟಿಕೆಗಳು ಅಂತಿಮವಾಗಿ ಬೆಂಗಳೂರಿಗೆ ಬಂದಿದ್ದು, ಇದು ಬೆಂಗಳೂರಿನ ಟ್ರಾಫಿಕ್ಗೆ ಸಂಪೂರ್ಣ ಅರ್ಥವನ್ನು ನೀಡುತ್ತದೆ ಎಂದು ಮತ್ತೋರ್ವ ಬಳಕೆದಾರರು ಬರೆದಿದ್ದಾರೆ.