

ಧಾರವಾಡ: ಪುರುಷ ಪ್ರಧಾನ ಸಮಾಜದಲ್ಲಿ ಪ್ರಾಚೀನ ಕಾಲದಿಂದಲೂ ಮಹಿಳೆಯರ ಶೋಷಣೆ ನಡೆಯುತ್ತ ಬಂದಿದೆ. ಸಂಪ್ರದಾಯ, ಮೂಢನಂಬಿಕೆಗಳ ಹೆಸರಿನಲ್ಲಿ ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಮಹಿಳೆಯರಿಗೆ ಆರ್ಥಿಕ ಭದ್ರತೆ, ಸಾಮಾಜಿಕ ರಕ್ಷಣೆ ಅವಶ್ಯ ಎಂದು ಸಾಹಿತಿ ಶ್ರೀನಿವಾಸ ವಾಡಪ್ಪಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಇತ್ತೀಚೆಗೆ ಏರ್ಪಡಿಸಿದ್ದ ಶ್ರೀಮತಿ ಯಮನಮ್ಮ ಅನಂತಪ್ಪ ಹಡಗಲಿ ಹಾಗೂ ಪ್ರೊ. ಭೂಪಾಲಪ್ಪ ಬಾ. ಬಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಸುಪ್ರಿಯಾ ಬೆಳವಿ ಮಹಿಳೆಯರು ಮಾತನಾಡಿ, ಇಂದಿನ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದರೂ ಸಿಗಬೇಕಾದ ಸ್ಥಾನಮಾನ ದೊರೆಯುತ್ತಿಲ್ಲ ಎಂದರು.
ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಮಹಾಂತೇಶ ನರೇಗಲ್ ನಿರೂಪಿಸಿದರು. ಮೆಘಾ ಹುಕ್ಕೇರಿ ಪ್ರಾರ್ಥಿಸಿದರು. ಮಾರ್ತಾಂಡಪ್ಪ ಕತ್ತಿ ವಂದಿಸಿದರು. ಡಾ. ಲಿಂಗರಾಜ ಅಂಗಡಿ, ಸುಜಾತಾ ಹಡಗಲಿ, ನಂದಿನಿ ಬಾಗಿ, ಇತರರಿದ್ದರು.