ಪಾರ್ಲೆ ಜಿ ಬಿರಿಯಾನಿ ಮಾಡಿದ ಯುವತಿ ! Parle G Biryani..ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರ ಆಗ್ರಹ

Women Make Parle G Biryani  video viral
Published on

Parle G Biryani :  ಸದ್ಯ ಬಿರಿಯಾನಿ ಪ್ರಯೋಗದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಪಾರ್ಲೆ-ಜಿ ಬಿಸ್ಕೆಟ್‌ಗಳಿಂದ ಮಹಿಳೆಯೊಬ್ಬರು ಬಿರಿಯಾನಿ ತಯಾರಿಸಿದ್ದಾರೆ. ಇದನ್ನು ನೋಡಿದ  ನೆಟ್ಟಿಗರು ಯುವತಿ ವಿರುದ್ಧ ಕಿಡಿಕಾರಿದ್ದಾರೆ.

ಬಿರಿಯಾನಿ ಎಲ್ಲರ ಮೆಚ್ಚಿನ ಖಾದ್ಯ. ಇದರ ಪರಿಮಳ ಮೂಗಿಗೆ ಬಡಿದರೆ ಬಾಯಲ್ಲಿ ನೀರೂರಿಸುತ್ತದೆ.  ಚಿಕನ್ ಬಿರಿಯಾನಿ, ಹೈದರಾಬಾದ್ ಮಟನ್ ಬಿರಿಯಾನಿ, ವೆಜ್ ಬಿರಿಯಾನಿ, ಮಶ್ರೂಮ್ ಬಿರಿಯಾನಿ, ಪ್ರಾನ್ ಬಿರಿಯಾನಿ ಗೊತ್ತೇ ಇದೆ.. ಆದರೆ ಪಾರ್ಲೆ-ಜಿ ಜೊತೆ ಬಿರಿಯಾನಿ ಮಾಡುವ ಬಗ್ಗೆ ಯೋಚಿಸಿದ್ದೀರಾ? ಇದು ಸ್ವಲ್ಪ ವಿಚಿತ್ರ ಎನಿಸಬಹುದು ಆದರೆ ಇದು ಸಂಪೂರ್ಣ ಸತ್ಯ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿ.. ಇದರಲ್ಲಿ ಪಾರ್ಲೆ ಜಿ ಬಿಸ್ಕೆಟ್ ಜೊತೆ ಬಿರಿಯಾನಿ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಅನ್ನದ ಜೊತೆಗೆ ಪಾರ್ಲೆ ಜಿ ಬಿಸ್ಕತ್ತುಗಳೂ ಕಾಣಸಿಗುತ್ತವೆ. ಒಳ್ಳೆಯ ಮಸಾಲೆ ಹಾಕಿ ಈ ಬಿರಿಯಾನಿ ಮಾಡಿದ್ದೇನೆ ಎನ್ನುತ್ತಾರೆ ಮಹಿಳೆ. ಇದಲ್ಲದೆ, ತನ್ನ ಹಿಂದೆ ಕಾಣುವ ಮಕ್ಕಳು ತನ್ನ ವಿದ್ಯಾರ್ಥಿಗಳು. ಬಿರಿಯಾನಿ ತಿನ್ನಲೇಬೇಕು ಎಂದು ಹಠ ಹಿಡಿದವರಿಗೆ ಈ ಸ್ಪೆಷಲ್ ಬಿರಿಯಾನಿ ಮಾಡಿ ಅಚ್ಚರಿ ಮೂಡಿಸಿದೆ ಎಂದಿದ್ದಾರೆ.

ಈ ವೀಡಿಯೋವನ್ನು ಕ್ರೀಮಿಕ್ರಿಯೇಷನ್ಸ್‌ಬೈಹ್‌ಕ್ರಿ11 ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಆ ವಿಡಿಯೋದಲ್ಲಿರುವ ಮಹಿಳೆಯ ಹೆಸರು ಹೀನಾ ಕೌಸರ್. ಈ ವೀಡಿಯೋ ನೋಡಿದವರೆಲ್ಲ ನಾನಾ ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 'ಈ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಬೇಕು. ಈಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.. ಹೀಗೆ ಬಿರಿಯಾನಿ ತಯಾರಿಸಿ ಊಟ ಹಾಳು ಮಾಡಿದ್ದಾಳೆ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net