

ನವದೆಹಲಿ: ಅಹಿತರಕ ಘಟನೆ ಹಾಗೂ ಪ್ರಯಾಣಿಕರ ದುರ್ವತನೆಯ ಕಾರಣದಿಂದಲೇ ದೆಹಲಿ ಮೆಟ್ರೋ ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಸೀಟಿಗಾಗಿ ಗಲಾಟೆ ಮಾಡುವುದು, ರೀಲ್ಸ್, ರೊಮ್ಯಾನ್ಸ್ ಇದೆಲ್ಲಾ ಕಾಮನ್ ಆಗ್ಬಿಟ್ಟಿದೆ. ಇಂತಹ ವರ್ತನೆಗಳನ್ನು ಮಾಡಬಾರದು ಎಂದು ಎಚ್ಚರಿಗೆ ನೀಡಿದರೂ ಸಹ ಈ ಚಟುವಟಿಕೆಗಳು ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಪದೇ ಪದೇ ಇಂತಹ ಘಟನೆಗಳು ಬೆಳಕಿಗೆ ಬರುತ್ತಲೇ ಇವೆ. ಇದೀಗ ಅಂತಹದ್ದೇ ಒಂದು ಸಂಘರ್ಷ ನಡೆದಿದ್ದು, ಸೀಟಿನ ವಿಚಾರಕ್ಕಾಗಿ ಮಹಿಳಾ ಪ್ರಯಾಣಿಕರಿಬ್ಬರ ನಡುವೆ ಜಡೆ ಜಗಳ ನಡೆದಿದೆ. ಇವರಿಬ್ಬರೂ ಸಹ ಜುಟ್ಟು ಹಿಡಿದುಕೊಂಡು ಜಗಳವಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಇಬ್ಬರು ಮಹಿಳೆಯರು ಮೆಟ್ರೋ ಕೋಚ್ ಒಳಗೆ ದೈಹಿಕ ಜಗಳದಲ್ಲಿ ತೊಡಗಿರುವುದು ಕಂಡುಬಂದಿದೆ. ಬದ್ಖಲ್ ಮೋರ್ ನಿಲ್ದಾಣದ ಬಳಿಯ ಮೆಟ್ರೋದಲ್ಲಿ ಮಹಿಳೆಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಮಾತಿನ ಮೂಲಕ ಪ್ರಾರಂಭವಾದ ಜಗಳ ಕಪಾಳಮೋಕ್ಷ ಹಾಗೂ ಕೂದಲು ಎಳೆಯುವ ಹಂತಕ್ಕೆ ಬಂದು ತಲುಪಿದ್ದು, ಮೆಟ್ರೋದಲ್ಲಿದ್ದ ಸಹ ಪ್ರಯಾಣಿಕರು ಒಂದು ಕ್ಷಣ ದಿಗ್ಭ್ರಮೆಗೊಳ್ಳುವಂತೆ ಮಾಡಿದೆ.
(ಏಜೆನ್ಸೀಸ್)
ದೆಹಲಿ ಮೆಟ್ರೋ ಒಳಗೆ ನಡೆದ ವಾದಗಳು ಅಥವಾ ದೈಹಿಕ ವಾಗ್ವಾದಗಳ ವಿಡಿಯೋಗಳು ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಇತ್ತೀಚಿನ ತಿಂಗಳುಗಳಲ್ಲಿ ಕೆಲವೊಮ್ಮೆ ಸೀಟುಗಳಿಗಾಗಿ, ಕೆಲವೊಮ್ಮೆ ಯಾರೊಬ್ಬರ ಕಾಲನ್ನು ತುಳಿಯುವ ಅಥವಾ ಯಾರನ್ನಾದರೂ ತಳ್ಳುವ ಬಗ್ಗೆ ಜಗಳಗಳು ಸಂಭವಿಸಿವೆ.
ಇನ್ನೂ ಈ ವಿಡಿಯೋದಲ್ಲಿ ಇಬ್ಬರು ಮಹಿಳೆಯರು ಪರಸ್ಪರ ಕುಸ್ತಿಯಾಡುತ್ತಿರುವುದನ್ನು ಕಾಣಬಹುದು. ಅವರು ಪರಸ್ಪರ ಹೊಡೆದಾಡಿಕೊಳ್ಳುತ್ತಾ ಸೀಟಿನ ಮೇಲೆ ಬಿದ್ದಿದ್ದಾರೆ. ನಂತರ ರೈಲಿನ ಬಾಗಿಲುಗಳು ತೆರೆದುಕೊಂಡು ಪ್ರಯಾಣಿರು ರೈಲು ಇಳಿದು ಹೊರ ಹೋಗುತ್ತಿದ್ದರೂ ಇವರು ತಮ್ಮ ಜಗಳ ಮುಂದುವರೆಸಿದ್ದಾರೆ. ಕೆಲವು ಸಹ ಪ್ರಯಾಣಿಕರು ಇವರ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ್ದಾರೆ. ಆದರೂ ಇವರು ತಮ್ಮ ಜಗಳ ಮುಂದುವರೆಸಿದ್ದಾರೆ. ಕೋಚ್ನಲ್ಲಿ ಹಲವಾರು ಸೀಟುಗಳು ಖಾಲಿಯಾಗಿ ಕಾಣಿಸಿಕೊಂಡರೂ, ಜಗಳ ನಿರಂತರವಾಗಿ ಮುಂದುವರಿದಿರುವುದು ವೀಕ್ಷಕರನ್ನು ದಿಗ್ಭ್ರಮೆಗೊಳಿಸಿದೆ.