ರೂಮ್​ನಲ್ಲಿ ಸೊಸೆ ಕೂಡಿದ ಅತ್ತೆ-ಮಾವ! ಹಾವು ಬಿಟ್ಟು ವರದಕ್ಷಿಣೆಗೆ ಕಿರುಕುಳ; ಕಡೆಯಲ್ಲಿ ಕಾದಿತ್ತು ಬಿಗ್ ಟ್ವಿಸ್ಟ್​ | Dowry Dispute

ವಿಜಯವಾಣಿ (97)
Published on

Dowry Dispute: ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆಗಾಗಿ ಹೆಣ್ಣುಮಕ್ಕಳಿಗೆ ಕೊಡುವ ಕಿರುಕುಳದ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದ ತಿಂಗಳಷ್ಟೇ, ಗ್ರೇಟರ್ ನೋಯ್ಡಾದಲ್ಲಿ ಹೆಚ್ಚುವರಿ ವರದಕ್ಷಿಣೆಗೆ ಬೇಡಿಕೆಯಿಟ್ಟ ಕುಟುಂಬಸ್ಥರು, ತಮ್ಮ ಸೊಸೆಗೆ ಚಿತ್ರಹಿಂಸೆ ನೀಡಿ, ಬೆಂಕಿ ಹಚ್ಚಿ ಕೊಂದ ಘಟನೆ ದೇಶವ್ಯಾಪಿ ಸಂಚಲನ ಮೂಡಿಸಿತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ತವರು ಮನೆಯಿಂದ ಹಣವನ್ನು ತರುವಂತೆ ಚಿತ್ರಹಿಂಸೆ ಕೊಟ್ಟ ಗಂಡನ ಹೆತ್ತವರು, ರೂಮ್​ನಲ್ಲಿ ಕಟ್ಟಿಹಾಕಿದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.

ಮೊದಲಿಗೆ 1.5 ಲಕ್ಷ ರೂ. ಬೇಡಿಕೆಯಿಟ್ಟ ಮಹಿಳೆಯ ಗಂಡನ ಮನೆಯವರು, ಆ ಹಣ ತಂದು ಕೊಡುವವರೆಗೂ ಆಕೆಯನ್ನು ನೆಮ್ಮದಿಯಿಂದ ಇರಲು ಬಿಟ್ಟಿರಲಿಲ್ಲ. ಇಷ್ಟಾದರೂ ಸಹ ತಪ್ಪದ ಚಿತ್ರಹಿಂಸೆ, 5 ಲಕ್ಷ ರೂ. ಕೊಡುವಂತೆ ಪೀಡಿಸುವತ್ತ ಸಾಗಿತು. ತನ್ನ ಅತ್ತೆ-ಮಾವನ ಕಾಟಕ್ಕೆ ಬೇಸತ್ತ ಮಹಿಳೆಯನ್ನು ಕಾನ್ಪುರದ ಕಾಲೋನಿ ಗಂಜ್ ಮೂಲದ ರೇಷ್ಮಾ ಎಂದು ಗುರುತಿಸಲಾಗಿದೆ. 2021ರ ಮಾರ್ಚ್ 19ರಂದು ಶಹನವಾಜ್ ಎಂಬ ವ್ಯಕ್ತಿಯನ್ನು ವಿವಾಹವಾದ ಈಕೆ, ಮದುವೆಯಾದ ಒಂದು ತಿಂಗಳಿಗೆ ಗಂಡನ ಪೋಷಕರ ಅಸಲಿ ಮುಖವನ್ನು ಕಂಡಳು.

ವಿಪರೀತ ಚಿತ್ರಹಿಂಸೆ ಮುಂದುವರಿದಿದ್ದು, ಈ ತಿಂಗಳ 18ರಂದು, 5 ಲಕ್ಷ ರೂ. ತರದ ರೇಷ್ಮಾಳನ್ನು ಆಕೆಯ ಅತ್ತೆ-ಮಾವ, ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಇದೇ ವೇಳೆ ಹಣವನ್ನು ತಂದುಕೊಡದಿದ್ದರೆ, ಹಾವನ್ನು ಬಿಡುವುದಾಗಿಯೂ ಎಚ್ಚರಿಸಿದ್ದಾರೆ. ಅಂತಿಮವಾಗಿ ಸರ್ಪ ಬಿಟ್ಟು ಕಚ್ಚಿಸಿದ್ದಾರೆ. ಜೀವ ಉಳಿಸಿ ಎಂದು ಅಂಗಲಾಚಿದ ರೇಷ್ಮಾಳಿಗೆ, ಪತಿ ಮತ್ತು ಅವರ ಪೋಷಕರಿಂದ ಯಾವುದೇ ಸಹಾಯ ಸಿಗಲಿಲ್ಲ. ಪುಣ್ಯಕ್ಕೆ ಫೋನ್ ಇಟ್ಟುಕೊಂಡಿದ್ದ ಆಕೆ, ತನ್ನ ಸಹೋದರಿಗೆ ಕರೆ ಮಾಡಿ, ವಿಷಯ ಮುಟ್ಟಿಸಿದ್ದಾಳೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ರೇಷ್ಮಾ ಸಹೋದರಿ, ತಂಗಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

ಸಾವಿನ ದವಡೆಯಿಂದ ಪಾರಾದ ರೇಷ್ಮಾ, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ ಸಹೋದರಿ ರಿಜ್ವಾನಾ, ರೇಷ್ಮಾ ಪತಿ ಶಹನವಾಜ್, ಆತನ ಪೋಷಕರು, ಅಣ್ಣ, ಸಹೋದರಿ ಮತ್ತು ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net