'OG' ಟ್ರೈಲರ್​ ರಿಲೀಸ್; ಡೆಡ್ಲಿ ಲುಕ್​ನಲ್ಲಿ ಥ್ರಿಲ್​ ಹೆಚ್ಚಿಸಿದ 'ಪವನ್ ಕಲ್ಯಾಣ್'| og movie

og trailer
Published on

ಹೈದರಾಬಾದ್:‌ ಇಂದು (ಸೆ.22) ನಟ ಪವನ್‌ ಕಲ್ಯಾಣ್‌ ಹಾಗೂ ಇಮ್ರಾನ್ ಹಶ್ಮಿ ನಟನೆಯ 'ಒಜಿ' ಸಿನಿಮಾದ ಟ್ರೈಲರ್​ ಬಿಡುಗಡೆ ಕಂಡಿದೆ. ಮಾಸ್​ ಡ್ರಾಮಾ ಚಿತ್ರವಾದ 'ದೆ ಕಾಲ್ ಹಿಮ್ ಒಜಿ' ಟೈಟಲ್​ ಬಿಡುಗಡೆಯಾದಾಗಿನಿಂದ ಈ ಸಿನಿಮಾ ಬಗ್ಗೆ ಅಭಿಮಾನಿಗಳು ಕಾತುರರಾಗಿದ್ದಾರೆ. ಹಾಗಾಗಿ ಚಿತ್ರತಂಡ ಇಂದು ಅಧಿಕೃತವಾಗಿ ಟ್ರೈಲರ್​ ಲಾಂಚ್​ ಮಾಡಿದೆ.

ಈ ಸಿನಿಮಾದಲ್ಲಿ ಪ್ರಕಾಶ್ ರಾಜ್, ಪ್ರಿಯಾಂಕಾ ಮೋಹನ್, ಅರ್ಜುನ್ ದಾಸ್ ಮತ್ತು ಶ್ರೀಯಾ ರೆಡ್ಡಿಯಂತಹ ತಾರಾಬಳಗ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸುಜೀತ್ ನಿರ್ದೇಶನದ ಈ ಚಿತ್ರವನ್ನು ಡಿವಿವಿ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಡಿವಿವಿ ದಾನಯ್ಯ ಮತ್ತು ಕಲ್ಯಾಣ್ ದಾಸರಿ ನಿರ್ಮಿಸಿದ್ದಾರೆ.

(ಏಜೆನ್ಸೀಸ್)

ಇನ್ನೂ ಸಿನಿಮಾದ ಟ್ರೈಲರ್​ ಬಿಡುಗಡೆಯಾಗುತ್ತಿದ್ದಂತೆ ಎಲ್ಲೆಡೆ ಸಂಚಲನ ಸೃಷ್ಟಿಸಿದೆ. ತೆರೆಕಂಡ ಕೆಲವೇ ಗಂಟೆಗಳಲ್ಲಿ 30 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಆ್ಯಕ್ಷನ್ ಲುಕ್​ನಲ್ಲಿ ಪವನ್ ನಟಿಸಿದ್ದು, ಮಾಸ್​ ದೃಶ್ಯಗಳು ದೂಳ್​ ಎಬ್ಬಿಸಿವೆ. ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸುವಲ್ಲಿ ಈ ಟ್ರೇಲರ್ ಅಭಿಮಾನಿಗಳನ್ನು ಗೆದ್ದಿದೆ.

ಈ ಸಿನಿಮಾ ಇದೇ ಸೆಪ್ಟೆಂಬರ್ 25 ರಂದು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ತೆಲಂಗಾಣವು ಸೆಪ್ಟೆಂಬರ್ 24 ರಂದು ರಾತ್ರಿ 9 ಗಂಟೆಗೆ ಪ್ರೀಮಿಯರ್‌ಗಳನ್ನು ಆಯೋಜಿಸಲಿದ್ದು, ಟಿಕೆಟ್ ಬೆಲೆಯನ್ನು ರೂ 800 ಎಂದು ನಿಗದಿಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net