

ತಿರುಮಲಯಪಾಲಂ (ಖಮ್ಮಂ): ಮೊದಲೇ ಜೀವನದಲ್ಲಿ ಯಾರೊಬ್ಬರಿಂದಲೋ ಮೋಸ ಹೋಗಿ, ಮಾನಸಿಕವಾಗಿ ಕುಗ್ಗಿ ಹೋಗಿದ್ದ ಮಹಿಳೆಯೊಬ್ಬಳು, ಮದುವೆಯಾದ ಬಳಿಕವಾದರೂ ನಾನು ನೆಮ್ಮದಿಯ ಜೀವನ ನೋಡಬಹುದು ಎಂಬ ಆಸೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಆದರೆ, ಮದುವೆಯಾಗಿ ಒಂದು ಮಗು ಆದ ನಂತರವೂ ಬಾಳಿನಲ್ಲಿ ನೆಮ್ಮದಿಯ ಭರವಸೆ ಬೆಳಕು ಕಾಣದ್ದನ್ನು ಅರಿತು ಕಣ್ಣೀರಿಟ್ಟಿದ್ದಾಳೆ. (Cheating Case).
ನಿಶ್ಚಯಿಸಿದ ವ್ಯಕ್ತಿಯೊಂದಿಗೆ ಮದುವೆ ಆದ ಮಹಿಳೆ, ಮಗುವಿಗೆ ಜನ್ಮ ನೀಡಿದ ಬಳಿಕ ಗಂಡ ಮತ್ತು ಆತನ ಪೋಷಕರು ಏಕಾಏಕಿ ಮನೆಯಿಂದ ಹೊರಗಟ್ಟಿದ್ದಾರೆ. ಆ ಮಗು ನನ್ನದಲ್ಲ, ಬೇರೆ ಯಾರದ್ದೋ ಎಂದು ಪತಿ ಶಂಕಿಸಿ, ಹೆಂಡತಿಯನ್ನು ಮನೆಗೆ ಸೇರಿಸಿಲ್ಲ. ಮಹಿಳೆಯ ದೂರಿನ ಮೇರೆಗೆ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ಎರಡು ವರ್ಷಗಳಿಂದ, ಖಮ್ಮಂ ಗ್ರಾಮೀಣ ಮಂಡಲದ ಅರೆಕೋಡುವಿನಲ್ಲಿರುವ ಮಹಿಳೆಯ ಚಿಕ್ಕಮ್ಮನ ಮಗ ಚಿರ್ರಾ ಹರೀಶ್ ಆಗಾಗ್ಗೆ ಮಹಿಳೆಯ ಮನೆಗೆ ಭೇಟಿ ನೀಡುತ್ತಿದ್ದ. ನಾನು ಆಕೆಯನ್ನು ತುಂಬ ಇಷ್ಟಪಡುತ್ತೀದ್ದೇನೆ ಎಂದು ಹೇಳಿ, ಮದುವೆಯಾಗುವುದಾಗಿ ಕುಟುಂಬಸ್ಥರನ್ನು ಒಪ್ಪಿಸಿದ್ದ. ಇದರ ಮೇರೆಗೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಕೆಲವೇ ವರ್ಷಗಳಲ್ಲಿ ಮಹಿಳೆ ಗರ್ಭೀಣಿಯಾಗಿ, ಒಂದು ಮಗುವಿಗೆ ಜನ್ಮವೂ ನೀಡಿದಳು. ಮಗು ಜನಿಸಿದ್ದೇ ತಡ ಪತಿಯ ಕರಾಳ ಮುಖ ಬಟಾಬಯಲಾಗಿದೆ.
ಪತಿ ಹರೀಶ್, ನನಗೂ ಅವಳಿಗೂ ಯಾವುದೇ ಸಂಬಂಧವಿಲ್ಲ. ಮತ್ತು ಆ ಮಗು ತನ್ನದಲ್ಲ ಎಂದು ಆರೋಪಿಸಿದ್ದಾನೆ. ಇಷ್ಟೆಲ್ಲ ನಡೆದ ಮೇಲೂ ತನ್ನ ಮೂರು ತಿಂಗಳ ಮಗುವನ್ನು ಪತಿಯ ಮನೆಗೆ ಕರೆದುಕೊಂಡು ಹೋದ ಪತ್ನಿಯನ್ನು ಹರೀಶ್ ಒಳಗೆ ಸೇರಿಸಿಲ್ಲ. ಹರೀಶ್ ಮತ್ತು ಆತನ ಪೋಷಕರು, ಮನೆಯೊಳಗೆ ಕಾಲಿಡದಂತೆ ಎಚ್ಚರಿಸಿ, ಕೊಲೆ ಬೆದರಿಕೆಯನ್ನು ಹಾಕಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಹಿಳೆಯ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಎಸ್‌ಐ ಕೂಚಿಪುಡಿ ಜಗದೀಶ್ ತಿಳಿಸಿದ್ದಾರೆ,(ಏಜೆನ್ಸೀಸ್).