ಇನ್ಮುಂದೆ ತಮಿಳುನಾಡಿನ ದೇವಾಲಯಗಳಲ್ಲಿ ಮಹಿಳಾ ಅರ್ಚಕರು ಪೂಜೆ ಮಾಡಲಿದ್ದಾರೆ: ಸಿ.ಎಂ ಸ್ಟಾಲಿನ್

Mk Stalin
Published on

ತಮಿಳುನಾಡು:  ಇನ್ಮುಂದೆ ದ್ರಾವಿಡ ಮಾದರಿಯ ಆಡಳಿತದಲ್ಲಿ ಮಹಿಳಾ ಅರ್ಚಕರು ಪೂಜೆ ಮಾಡಲಿದ್ದಾರೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.

 ಟ್ವೀಟ್​​​ನಲ್ಲಿ ಏನಿದೆ?:  "ಮಹಿಳೆಯರು ಪೈಲೆಟ್ ಮತ್ತು ಗಗನಯಾತ್ರೆಯಲ್ಲಿ ಸಾಧನೆಗೈದಿದ್ದರೂ, ಹೆಣ್ಣು ದೇವರ ದೇವಾಲಯಗಳನ್ನೂ ಸೇರಿದಂತೆ ಮಹಿಳೆಯರು ಅಚರ್ಕ ವೃತ್ತಿಯನ್ನು ಮಾಡುವುದು ಅಶುದ್ಧ ಎಂದು ಪರಿಗಣಿಸಲಾಗುತ್ತದೆ. ಆದರೆ ಕೊನೆಗೂ ಈ ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿದೆ." ಎಂದು ಟ್ವೀಟ್​ ಮಾಡಿದ್ದಾರೆ.

"ಎಲ್ಲಾ ಜಾತಿಯ ಜನರನ್ನು ದೇವಾಲಯಗಳ ಅರ್ಚಕರನ್ನಾಗಿ ನೇಮಿಸಿ ನಮ್ಮ ತಮಿಳುನಾಡಿನ ದ್ರಾವಿಡ ಮಾದರಿಯ ಸರ್ಕಾರ ತಂತಾಯ್ ಪೆರಿಯಾರ್​ ಅವರ ಹೃದಯದ ಮುಳ್ಳು ತೆಗೆದಿದ್ದೆವೆ. ಈಗ ಮಹಿಳೆಯರೂ ಗರ್ಭಗುಡಿಗೆ ಕಾಲಿಡುವುದರ ಮೂಲಕ ಸಮಾನತೆಯ ನವ ಯುಗವನ್ನು ತರುತ್ತಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.

ತಮಿಳುನಾಡಿನ ನಾಯಕ ಇ.ವಿ. ಪೆರಿಯಾರ್, "ಬೇರೆ ಜಾತಿಯವರನ್ನು ಪುಜೆ ಮಾಡಲು ಬಿಡದೇ ಇರುವುದು ಹೃದಯಕ್ಕೆ ಮುಳ್ಳು ಚುಚ್ಚಿದಂತೆ ಆಗುತ್ತದೆ" ಎಂದಿದ್ದರು. ಇವರ ಅನುಯಾಯಿ ಸ್ಟಾಲಿನ್ ಹೊಸ ಯೋಜನೆಯನ್ನು ತಂದಿದ್ದು, ತಿರುಚಿರಪಲ್ಲಿಯ ಶ್ರೀ ರಂಗನಾಥರ್ ದೇವಾಲಯದಲ್ಲಿ ವಿವಿಧ ಮತಗಳ ಆಯ್ದ ಜನರಿಗೆ ಅರ್ಚಕ ವೃತ್ತಿಯ ತರಬೇತಿ ನೀಡಲಾಗಿದೆ. ಇದರಲ್ಲಿ ಮೂವರು ಮಹಿಳೆಯರೂ ಇದ್ದಾರೆ.

ಈಗಾಗಲೇ ರಾಜ್ಯದ ಕೆಲವು ದೇವಸ್ಥಾನಗಳಲ್ಲಿ ಮಹಿಳೆಯರೇ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೂ ಧಾರ್ಮಿಕ ಮತ್ತು ದತ್ತಿ ಸಚಿವ ಪಿ.ಕೆ.ಸೇಕರ್ ಬಾಬು ಅವರು 2021 ರಲ್ಲಿ ಮಹಿಳೆಯರ ತರಬೇತಿಯ ನಂತರ ದೇವಾಲಯಗಳಲ್ಲಿ ಅರ್ಚಕರಾಗಿ ನೇಮಕಗೊಳ್ಳಬಹುದು ಎಂದು ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net