ಮೂಢನಂಬಿಕೆಗೆ ಗರ್ಭಿಣಿ ಬಲಿ! ಪತಿ ಮಾಡಿದ ಎಡವಟ್ಟಿಗೆ ಹೋಯಿತು ಎರಡು ಜೀವ | Superstition

ವಿಜಯವಾಣಿ (6)
Published on

Superstition: ವಿಜ್ಞಾನ ಮತ್ತು ತಂತ್ರಜ್ಞಾನ ಶರವೇಗದಲ್ಲಿ ಸಾಗುತ್ತಿರುವ ಕಾಲದಲ್ಲಿ ಇಂತಹ ಮೂಢನಂಬಿಕೆಗಳಿಗೆ ಇನ್ನೂ ಜನ ಬಲಿಯಾಗುತ್ತಿದ್ದಾರೆ ಎಂದರೆ ಅಚ್ಚರಿ ಸಂಗತಿಯೇ ನಿಜ. ಯಾರೋ ಹೇಳುವ ಮಾತು, ಮೂಢನಂಬಿಕೆಗಳಿಗೆ ಕಿವಿಗೊಟ್ಟು, ತಮ್ಮ ಅಮೂಲ್ಯ ಜೀವನ ಮತ್ತು ಜೀವನವನ್ನೇ ಸರ್ವನಾಶ ಮಾಡಿಕೊಳ್ಳುವ ಜನರು ಇಂದಿಗೂ ಇದ್ದಾರೆ ಎಂಬುದೇ ಸದ್ಯ ಹಲವರ ಆಶ್ಚರ್ಯಕ್ಕೆ ಕಾರಣ. ಸದ್ಯ ಈ ಸಾಲಿಗೆ ಇಲ್ಲೊಂದು ಘಟನೆ ಜ್ವಲಂತ ಸಾಕ್ಷಿ.

ನೂತನ ಮನೆ ಕಟ್ಟಿಸಲು ಮುಂದಾದ ಮೂರ್ಖ ಪತಿ, ತನ್ನ ಕನಸಿನ ಮನೆ ನಿರ್ಮಾಣದ ಸಮಯದಲ್ಲಿ ಪತ್ನಿ ಮಗುವಿಗೆ ಜನ್ಮ ಕೊಡುವುದು ಸರಿಯಲ್ಲ. ಇದು ಅಶುಭದ ಸಂಕೇತ ಎಂದು ಭಾವಿಸಿ, ಆರು ತಿಂಗಳ ಗರ್ಭಿಣಿ ಪತ್ನಿಗೆ ಗರ್ಭಪಾತ ಮಾತ್ರೆಗಳನ್ನು ತಿನ್ನಿಸಿದ್ದಾನೆ. ಮಾತ್ರೆ ನುಂಗಿದ ಪರಿಣಾಮ ಮಹಿಳೆ ಕೆಲವೇ ಗಂಟೆಗಳಲ್ಲಿ ಉಸಿರು ಚೆಲ್ಲಿದ್ದಾಳೆ. ಮೃತ ಮಹಿಳೆಯನ್ನು ಹೈದರಾಬಾದ್​ನ ಆದಿಲಾಬಾದ್ ಜಿಲ್ಲಾ ಕೇಂದ್ರದ ಬಂಗಾರುಗುಡ ನಿವಾಸಿ ಪ್ರವಳಿಕಾ ಎಂದು ಗುರುತಿಸಲಾಗಿದೆ.

ಮೂರು ವರ್ಷಗಳ ಹಿಂದೆಯಷ್ಟೇ ಮಹಾರಾಷ್ಟ್ರದ ನಿವಾಸಿ ಪ್ರಶಾಂತ್ ಎಂಬಾತನನ್ನು ಮದುವೆಯಾಗಿದ್ದ ಪ್ರವಳಿಕಾಗೆ ಎರಡು ವರ್ಷದ ಮಗನಿದ್ದಾನೆ. ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ, ಹೊಸ ಮನೆ ನಿರ್ಮಾಣದ ಕೆಲಸದಲ್ಲಿ ತೊಡಗಿದ್ದ ಪತಿ, ಈ ಸಮಯದಲ್ಲಿ ಮಗು ಜನನ ಅಶುಭಕರ, ಕಷ್ಟಗಳನ್ನು ತಂದೊಡ್ಡುತ್ತದೆ ಎಂದು ಭಾವಿಸಿ, ಪ್ರವಳಿಕಾಗೆ ಗರ್ಭಪಾತ ಮಾತ್ರೆಗಳನ್ನು ನೀಡಿ ಇದೀಗ ಆಕೆಯ ಸಾವಿಗೆ ಕಾರಣನಾಗಿದ್ದಾನೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net