

ಹೈದರಾಬಾದ್: ಹೈದರಾಬಾದ್‌ನ ರ್ಯಾಲಿಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ, ವೇದಿಕೆಯ ಮೇಲೆ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಪ್ರಧಾನಿ ನೋಡುವ ತವಕದಲ್ಲಿ ಯುವತಿಯೊಬ್ಬಳು ಲೈಟ್ ಟವರ್ ಏರಿದ ದೃಶ್ಯವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ರ್ಯಾಲಿಯಲ್ಲಿ ಭಾಗಿಯಾದ ಬಳಿಕ ವೇದಿಕೆಗೆ ಬಂದ ಪ್ರಧಾನಿ ಮೋದಿ, ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಪ್ರಧಾನಿ ಅವರ ಗಮನವನ್ನು ಸೆಳೆಯಲು ಮುಂದಾದ ಯುವತಿಯೊಬ್ಬಳು ಅಲ್ಲೇ ಇದ್ದ ಲೈಟ್ ಟವರ್ನ ಏರಿ ಮೋದಿ ಅವರನ್ನು ಕೈಬೀಸಿ ಕರೆದಿದ್ದಾಳೆ.
ಪ್ರಧಾನಿ ಗಮನವನ್ನು ತನ್ನತ್ತ ಸೆಳೆಯುವ ಪ್ರಯತ್ನದಲ್ಲಿ ಯುವತಿ ಮುನ್ನೆಚ್ಚರಿಕೆ ವಹಿಸದೆ ಟವರ್ ಮೇಲಿರುವುದನ್ನು ಗಮನಿಸಿದ ಮೋದಿ, ಕೂಡಲೇ ಯುವತಿಯತ್ತ ನೋಡಿ, "ಬೇಟಾ ದಯವಿಟ್ಟು ಕೆಳಗೆ ಇಳಿಯಿರಿ. ಇದು ಸರಿಯಿಲ್ಲ, ನಾವು ನಿಮ್ಮೊಂದಿಗಿದ್ದೇವೆ. ನಿಮ್ಮ ಮಾತು ಕೇಳುತ್ತೇನೆ. ಈ ರೀತಿ ಮಾಡುವುದರಿಂದ ನಿಮಗೆ ಪ್ರಯೋಜನವಿಲ್ಲ, ನಾನು ನಿಮಗಾಗಿ ಇಲ್ಲಿಗೆ ಬಂದಿದ್ದೇನೆ" ಎಂದು ಮನವಿ ಮಾಡಿದರು.
ಯುವತಿ ಲೈಟ್ ಟವರ್ ಏರಿದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ,(ಏಜೆನ್ಸೀಸ್).