ಕಾಂಗ್ರೆಸ್​ನಿಂದ ಮಹಿಳಾ, ಸಂವಿಧಾನ ವಿರೋಧಿ ನೀತಿ

bjp
ಕೋಲಾರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್​.ವೇಣುಗೋಪಾಲ್​ ಮಾತನಾಡಿದರು.
Published on

ಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರವು ಮಹಿಳಾ ವಿರೋಧಿ ನೀತಿ ಅನುಸರಿಸಿಕೊಂಡು ಬಂದಿದ್ದು, ಲೋಕಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್​.ವೇಣುಗೋಪಾಲ್​ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶ, ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರ ನಡೆಸಿದಷ್ಟು ದಿನ ಸಂವಿಧಾನಕ್ಕೆ ವಿರುದ್ಧವಾಗಿ ರ್ನಿಣಯಗಳನ್ನು ಕೈಗೊಂಡಿದೆ. ಮಹಿಳೆಯರಿಗೆ ಅಪಮಾನ ಮಾಡುವುದು, ದೇಶ ದ್ರೋಹಿಗಳಿಗೆ ಬೆಂಬಲ ನೀಡುವುದೆ ಸಾಧನೆಯಾಗಿದೆ ಎಂದು ಆರೋಪಿಸಿದರು.
ಮಹಿಳೆಯರು ಸರ್ಕಾರಿ ಕೆಲಸ ಪಡೆಯಲು ಮಂಚ ಹತ್ತಬೇಕು ಎಂದು ಸಚಿವ ಪ್ರಿಯಾಂಕ್​ ರ್ಖಗೆ ಹೇಳಿಕೆ ನೀಡುವ ಮೂಲಕ ಇಡೀ ಮಹಿಳಾ ಸಮುದಾಯಕ್ಕೆ ಅವಮಾನ ಮಾಡಿದ್ದರು. ಇದೀಗ ಮಹಿಳೆಯರು ತಾಳಿ, ಕಾಲುಂಗುರ ತೆಗೆಸುವ ಕೆಲಸಕ್ಕೆ ಕೈಹಾಕಿದ್ದು, ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲು ಮಹಿಳೆಯರು ಮುಂದಾಗಬೇಕು ಎಂದು ಎಚ್ಚರಿಸಿದರು.
ಹಿಂದು ಸಂಪ್ರದಾಯದಲ್ಲಿ ಮಹಿಳೆಯರಿಗೆ ಕಾಲುಂಗುರ, ತಾಳಿ ಬಹಳಷ್ಟು ಶ್ರೇಷ್ಠವಾದದ್ದು, ಅನಾರೋಗ್ಯ ಸಂದರ್ಭದಲ್ಲಿ ಸ್ಕಾ$ನಿಂಗ್​ ಮಾಡುವ ಸಂದರ್ಭದಲ್ಲಿ ತೆಗೆಸುತ್ತಾರೆ. ಕಾಂಗ್ರೆಸ್​ ಹಿಂದು ಮಹಿಳೆಯರನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡುತ್ತಿದೆ. ಪರೀೆ ಬರೆಯಲು ಮುಸ್ಲಿಂ ಮಹಿಳೆಯರು ಹಿಜಾಬ್​ ಧರಿಸಲು ಅವಕಾಶ ನೀಡುವ ಮೂಲಕ ತೃಷ್ಟೀಕರಣ ಮಾಡುತ್ತಿದೆ ಎಂದು ದೂರಿದರು.
ವಂಟಮೂರಿ ಗ್ರಾಮದಲ್ಲಿ ಮಹಿಳೆ ಮೇಲಿನ ದೌರ್ಜನ್ಯ, ನಗ್ನಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿದ ಟನೆಗಳು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಲ್ಲಿ ಸರ್ಕಾರಗಳು ವಿಲವಾಗಿವೆ ಎಂದರು.
ಶಾಮನೂರು ಶಿವಶಂಕರಪ್ಪ ಅವರು ಮಹಿಳೆಯರು ಅಡುಗೆಮನೆಯಲ್ಲಿ ಇರಲು ಮಾತ್ರ ಲಾಯಕ್ಕು ಎಂದು ಹೇಳಿದ್ದಾರೆ. ಅವರ ಮನಸ್ಥಿತಿ ಮಹಿಳಾ ವಿರೋಧಿಯಾಗಿರುವುದು ಸ್ಪಷ್ಟವಾಗುತ್ತದೆ. ಕಾಂಗ್ರೆಸ್​ನಲ್ಲಿ ಪ್ರಿಯಾಂಕ ವಾಧ್ರಾ ಮತ್ತು ಸೋನಿಯಾ ಗಾಂಧಿ ಸಹ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾದ ಮತ್ತೊಂದು ಪಕ್ಷದ ಅಭ್ಯರ್ಥಿ ಬಗ್ಗೆ ಅಗೌರವವಾಗಿ ಮಾಡನಾಡುವುದು ಸರಿಯಲ್ಲ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಓಂಶಕ್ತಿ ಚಲಪತಿ, ಬಿ.ವಿ.ಮಹೇಶ್​, ಜಿಲ್ಲಾ ವಕ್ತಾರ ಎಸ್​.ಬಿ.ಮುನಿವೆಂಕಟಪ್ಪ, ಲೋಕಸಭೆ ಸಂಚಾಲಕ ಮಾಗೇರಿ ನಾರಾಯಣಸ್ವಾಮಿ, ಶ್ರೀನಿವಾಸಪುರ ಮಂಡಲ ಅಧ್ಯಕ್ಷ ಚಂದ್ರಶೇಖರ್​, ನಗರಸಭೆ ಸದಸ್ಯ ಪ್ರವಿಣ್​ ಗೌಡ, ಕೆಯುಡಿಎ ಮಾಜಿ ಅಧ್ಯಕ್ಷ ವಿಜಯ್​ಕುಮಾರ್​, ಮುಖಂಡರಾದ ರಾಜೇಶ್​ ಸಿಂಗ್​, ಕೆಂಬೋಡಿ ನಾರಾಯಣಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net