ಆಸ್ಪತ್ರೆಗೆಂದು ಬಂದಿದ್ದ ಮಹಿಳೆಗೆ ಗೇಟ್​ ಬಳಿಯೇ ಎದುರಾಯ್ತು ಸಂಕಷ್ಟ...ಅರ್ಧಗಂಟೆ ಅಲ್ಲೇ ಪರದಾಡಬೇಕಾಯಿತು...

Woman 1 March 20
Published on

ಗದಗ: ಆಸ್ಪತ್ರೆಗೆ ಬಂದಿದ್ದ ಮಹಿಳೆಯೋರ್ವರು ಪ್ರವೇಶ ದ್ವಾರದ ಬಳಿ ಕಾಲು ಸಿಕ್ಕಿಸಿಕೊಂಡು ಪರದಾಡಿದ ಘಟನೆ ಶಿರಹಟ್ಟಿ ತಾಲೂಕಿನ ಹೆಬ್ಬಾಳದಲ್ಲಿ ನಡೆದಿದೆ.

ಹೆಬ್ಬಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಹಿಳೆಯೋರ್ವರು ಬಂದಿದ್ದರು. ಆದರೆ ಗೇಟ್​ ಬಳಿ ನೆಲಕ್ಕೆ ಹಾಕಿದ್ದ ಕಬ್ಬಿಣದ ಗ್ರಿಲ್​ನಲ್ಲಿ ಕಾಲು ಸಿಕ್ಕಿಸಿಕೊಂಡು, ಅಲ್ಲಿಂದ ತೆಗೆಯಲಾಗದೆ ತೀವ್ರವಾಗಿ ನರಳಾಡಿದರು.

ಅಲ್ಲಿದ್ದ ಜನರೂ ಸಹ ಸಹಾಯಕ್ಕೆ ಬಂದರು. ಸುಮಾರು ಅರ್ಧಗಂಟೆ ಪ್ರಯತ್ನಿಸಿದರೂ ಮಹಿಳೆಯ ಕಾಲು ಕಬ್ಬಿಣದ ಸರಳುಗಳಿಂದ ಈಚೆಗೆ ಬರಲಿಲ್ಲ. ಬಳಿಕ ಮಶಿನ್​ನಿಂದ ಕಬ್ಬಿಣ ಕತ್ತರಿಸಿ, ಆಕೆಯನ್ನು ಕಾಪಾಡಲಾಯಿತು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net