ತನ್ನ ಜನನಾಂಗಕ್ಕೆ ತಾನೇ ಗ್ಲ್ಯೂ ಹಾಕಿ ಮುಚ್ಚಿದ ಮಹಿಳೆ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

Woman
Published on

ಮ್ಯಾಡ್ರಿಡ್​: ತನ್ನ ಜನನಾಂಗಕ್ಕೆ ತಾನೇ ಗ್ಲ್ಯೂ ಹಾಕಿ ಅಂಟಿಸಿಕೊಂಡು ಮಾಜಿ ಬಾಯ್​ಫ್ರೆಂಡ್​ ಕೃತ್ಯವೆಂದು ಬಿಂಬಿಸಲು ಹೊರಟ ಮಹಿಳೆಯೊಬ್ಬಳಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಮೂಲಕ ನ್ಯಾಯಾಲಯ ಶಾಕ್​ ನೀಡಿದೆ.

ವೆನೆಸಾ ಗೆಸ್ಟೋ ಎಂಬ ಮಹಿಳೆ ತನ್ನ ಮಾಜಿ ಬಾಯ್​ಫ್ರೆಂಡ್​ ಇವಾನ್​ ರಿಕೊ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿ, ಮನೆಯ ಹೊರವಲಯದಲ್ಲಿ ನನ್ನನ್ನು ಅಪಹರಿಸಿದ ಬಳಿಕ ಸೂಪರ್​ ಗ್ಲ್ಯೂ ಬಳಸಿ ನನ್ನ ಖಾಸಗಿ ಅಂಗವನ್ನು ಮುಚ್ಚಿ, ಅರಬೆತ್ತಲೆಯಾಗಿ ಏಕಾಂಗಿಯಾಗಿ ಬಿಟ್ಟು ಹಿಂಸಿಸಿದ್ದನ್ನು ಎಂದಿದ್ದಳು. ಇದೇ ಪ್ರಕರಣದಲ್ಲಿ ಬಾಯ್​ಫ್ರೆಂಡ್​ ಶಿಕ್ಷೆಗೂ ಗುರಿಯಾಗಿದ್ದ.

ಆದರೆ, ತನಿಖಾಧಿಕಾರಿಗಳ ಮುಂದೆ ಕೊನೆಗೂ ಗೆಸ್ಟೋ ಮುಖವಾಡ ಕಳಚಿಬಿದ್ದಿದೆ. ಸಿಸಿಟಿವಿಯನ್ನು ಪರಿಶೀಲಿಸಿದಾಗ ಗೆಸ್ಟೋ, ಚೀನಾ ಸೂಪರ್​ ಮಾರುಕಟ್ಟೆಯಲ್ಲಿ ಚಾಕು ಸೇರಿದಂತೆ ಸೂಪರ್​ ಗ್ಲ್ಯೂ ಮತ್ತು ಕಿಡ್ನಾಪ್​ ಕಿಟ್​ ಖರೀದಿಸಿರುವುದು ಬಹಿರಂಗವಾಗಿದೆ. ನನ್ನ ಮೇಲೆ ಹಲ್ಲೆ ಮಾಡಿ ಕೌನ್ಸಿಲ್​ ಬಿನ್​ ಲಾರಿಯಲ್ಲಿ ಚಿತ್ರಹಿಂಸೆ ನೀಡಲಾಯಿತು ಎಂದು ಹೇಳಿಕೆ ನೀಡಿದ್ದಳು. ಕಪ್ಪು ಕಾರಿನಲ್ಲಿ ನನ್ನನ್ನು ಅಪಹರಿಸಲಾಯಿತು ಎಂದಿದ್ದಳು. ಆದರೆ, ಸ್ಥಳ ಪರಿಶೀಲನೆ ನಡೆಸಿದಾಗ ಸಮೀಪದಲ್ಲಿ ಸಿಕ್ಕ ಸಿಸಿಟಿವಿಯಲ್ಲಿ ಒಂದೇ ಒಂದು ವಾಹನ ಓಡಾಡಿದೆ. ಅದು ಸಹ ಕಪ್ಪು ಕಾರಲ್ಲ. ಹೀಗಾಗಿ ಇದೆಲ್ಲಾ ಈಕೆಯದ್ದೇ ಕೃತ್ಯ ಎಂದು ಬಯಲಾಗಿದ್ದು, ಕೊನೆಗೆ ಗೆಸ್ಟೋ ಸಹ ತಪ್ಪೊಪ್ಪಿಕೊಂಡಿದ್ದಾಳೆ.

ಆದರೆ, ಆರೋಪ ಹೊತ್ತಿದ್ದ ಅಮಾಯಕ ಇವಾನ್​ ರಿಕೊ ಪ್ರಕರಣ ಸಾಬೀತು ಆಗುವ ಮುನ್ನ ಹಲವು ದಿನಗಳ ಜೈಲುವಾಸವನ್ನು ಅನುಭವಿಸಿದ್ದನು. ಆದರೆ, ನಿನ್ನೆಯಷ್ಟೆ ಗೆಸ್ಟೋ ಕರಾಳ ಮುಖ ಬಯಲಾಗಿದ್ದು, ಆಕೆಗೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿರುವುದಲ್ಲದೆ, ತಪ್ಪು ಮಾಡದೇ ಜೈಲು ಶಿಕ್ಷ ಅನುಭವಿಸಿದ ಮಾಜಿ ಬಾಯ್​ಫ್ರೆಂಡ್​ಗೆ 20,200 ಪೌಂಡ್​ (19,60,266 ರೂ.) ಪರಿಹಾರ ನೀಡುವಂತೆ ಸ್ಪೇನ್​ ನ್ಯಾಯಾಲಯ ಆದೇಶಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net