ಅವಳಿಗೆ ಗೊತ್ತೇ ಆಗದಂತೆ ಮಗಳು ಹುಟ್ಟಿದ್ಲಂತೆ!; ನಿದ್ರೆಯಲ್ಲಿದ್ದಾಗ ಆಯಿತು ಹೆರಿಗೆ!

Untitled-1
Published on

ನವದೆಹಲಿ: ಹೆರಿಗೆ ನೋವು ಎಂಥವರನ್ನೂ ಜಾಗೃತವಾಗಿರಿಸುತ್ತದೆ. ಆದರೆ ಇಲ್ಲೊಬ್ಬರು ಮಹಿಳೆಗೆ ನಿದ್ರೆಯಲ್ಲಿರುವಾಗಲೇ ಹೆರಿಗೆ ಆಗಿದ್ದು, ಮಗಳು ಹುಟ್ಟಿದ್ದೇ ತನಗೆ ಗೊತ್ತಾಗಲಿಲ್ಲ ಎಂದು ಹೇಳಿದ್ದಾರೆ. ಇಂಥದ್ದೊಂದು ವಿಚಿತ್ರ ಅನುಭವವನ್ನು ತಾಯಿಯೊಬ್ಬರು ಸ್ವತಃ ಹೇಳಿಕೊಂಡಿದ್ದಾರೆ.

ಇನ್ನೊಬ್ಬರಿಗೆ ಅಚ್ಚರಿ ಮೂಡಿಸುವಂಥ ಹುಟ್ಟಿನ ಕಥೆ ಇದ್ದರೆ ಹೇಳಿಕೊಳ್ಳಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಒಬ್ಬರು ಕೇಳಿದ್ದ ಪ್ರಶ್ನೆಗೆ ಮಹಿಳೆಯೊಬ್ಬರು ತಾವು ಮಗಳಿಗೆ ಜನ್ಮ ನೀಡಿದ್ದ ಅಪರೂಪದ ಪ್ರಸಂಗದ ಕುರಿತು ಹೇಳಿಕೊಂಡಿದ್ದಾರೆ. ಆ್ಯಮಿ ಡಂಬರ್ ಎಂಬಾಕೆ ಈ ಅನುಭವ ಹಂಚಿಕೊಂಡಿದ್ದಾರೆ.

ಸುಮಾರು 12 ಗಂಟೆಗಳ ಪ್ರಸವ ವೇದನೆಯಿಂದ ಬಳಲುತ್ತಿದ್ದ ನನಗೆ ನೋವು ಕಡಿಮೆ ಮಾಡಿಸಲು ಯಾವುದೋ ಔಷಧ ಕೊಡಲಾಗಿತ್ತು. ಹೀಗಾಗಿ ನನಗೆ ಕೆಲವೇ ಕ್ಷಣಗಳಲ್ಲಿ ಗಾಢ ನಿದ್ರೆ ಬಂದಿತ್ತು. ನರ್ಸ್​ ತನ್ನ ಮಾನಿಟರಿಂಗ್ ಸ್ಕ್ರೀನ್​ನಲ್ಲಿ ನೋಡುತ್ತಿದ್ದಾಗ ನಾನು ನಿದ್ರೆಯಲ್ಲಿದ್ದಾಗಲೇ ನನ್ನ ಹೊಟ್ಟೆ ಕುಗ್ಗಿದ್ದನ್ನು ಗಮನಿಸಿದ್ದಳು. ನರ್ಸ್ ಸೂಚನೆ ಮೇರೆಗೆ ನಾನು ಹೊದಿಕೆ ಸರಿಸಿ ನೋಡಿದರೆ ಮಗು ಹೊರಗೆ ಬಂದಿತ್ತು. ನಿದ್ರೆಯಲ್ಲಿದ್ದಾಗಲೇ ಹೆರಿಗೆ ಆಗಿತ್ತು ಎಂಬುದನ್ನು ಈಕೆ ಹೇಳಿಕೊಂಡಿದ್ದಾರೆ.

ತಕ್ಷಣ ಎಲ್ಲ ವೈದ್ಯರು, ನರ್ಸ್​ಗಳೂ ರೂಮ್​ಗೆ ಧಾವಿಸಿ ಬಂದಿದ್ದರು. ಆ ಕ್ಷಣಕ್ಕೆ ಅದು ಒಂಥರಾ ಭಯಂಕರ ಅನಿಸಿದ್ದರೂ ಕೆಲವೇ ಕ್ಷಣಗಳಲ್ಲಿ ಎಲ್ಲ ಸರಿ ಆಗಿತ್ತು. ಹೀಗೆ ಆ್ಯಮಿ ಡಂಬರ್ ಹಂಚಿಕೊಂಡಿರುವ ವಿಚಿತ್ರ ಹೆರಿಗೆ ಪ್ರಸಂಗದ ಕುರಿತು ಹಲವರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net