ನಾಯಿ ಮೇಲೆ ದಾಳಿ ನಡೆಸಿದ ಮಹಿಳೆಗೆ ಬಿಜೆಪಿ ನಾಯಕಿಯ ಕಚೇರಿ ಸಿಬ್ಬಂದಿಯಿಂದ ಕಪಾಳಮೋಕ್ಷ! Woman

untitled-design-35-6900a57dbf143
Published on

ಮಧ್ಯಪ್ರದೇಶ: ಬಿದಿನಾಯಿಯನ್ನು ಮಹಿಳೆಯೊಬ್ಬಳು ಮನಬಂದಂತೆ ದಂಡಿಸಿದ್ದಾಳೆ ಎಂಬ ಕಾರಣಕ್ಕೆ, ಬಿಜೆಪಿ ನಾಯಕಿ ಮೇನಕಾ ಗಾಂಧಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಯುವತಿಯೊಬ್ಬಳು, (Woman) ನಾಯಿ ಮೇಲೆ ಹಲ್ಲೆ ಮಾಡಿದ್ದ ಹೆಣ್ಣುಮಗಳಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ವಿಡಿಯೋದಲ್ಲೇನಿದೆ?

ವೈರಲ್ ಆಗಿರುವ ವೀಡಿಯೋದಲ್ಲಿ, ಗುರುತಿನ ಚೀಟಿ ಧರಿಸಿದ ಮಹಿಳೆಯೊಬ್ಬರು ಮತ್ತೊಂದು ಮಹಿಳೆಯನ್ನು ಹೊಡೆಯಲು ಪ್ರಾರಂಭಿಸಿದ್ದಾರೆ. ಆನಂತರ ಮಹಿಳೆಯು ನ್ಯಾಯಾಲಯದ ಪ್ರಕರಣದ ಬೆದರಿಕೆ ಹಾಕಿ ಮೇನಕಾ ಗಾಂಧಿ ಅವರ ಕಚೇರಿಯಿಂದ ಬಂದಿರುವುದಾಗಿ ಹೇಳಿಕೊಳ್ಳುತ್ತಾರೆ.

ಈ ವಿಡಿಯೋವನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತೆ ದೀಪಿಕಾ ನಾರಾಯಣ್ ಭಾರದ್ವಾಜ್ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಕ್ಲಿಪ್ ಅನ್ನು ಹಂಚಿಕೊಂಡಿದ್ದು, ಈಗಾಗಲೇ ಗಾಯಗೊಂಡಿರುವ ಮಹಿಳೆಯೊಬ್ಬರಿಗೆ ಕಪಾಳಮೋಕ್ಷ ಮಾಡಲಾಗಿದೆ. ಬೀದಿ ನಾಯಿ ಯಾರನ್ನಾದರೂ ಕಚ್ಚಿದೆ ಮತ್ತು ಮೇನಕಾ ಗಾಂಧಿ ಹೆಸರನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಆದಾಗ್ಯೂ, ಕಪಾಳಮೋಕ್ಷ ಮಾಡಿದ ಮಹಿಳೆ ಬೀದಿ ನಾಯಿಯನ್ನು ಕ್ರೂರವಾಗಿ ಹೊಡೆಯುತ್ತಿರುವ ಮತ್ತೊಂದು ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದ್ದು, ಇದು ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

ಈ ಕಾರ್ಯಕರ್ತೆಯು ಗಾಯಗೊಂಡ ಮಹಿಳೆಗೆ ಕಪಾಳಮೋಕ್ಷ ಮಾಡಿದ ಕೃತ್ಯವನ್ನು ಕೆಲವು ಬಳಕೆದಾರರು ಟೀಕಿಸಿದ್ದಾರೆ. ಒಬ್ಬ ಬಳಕೆದಾರರು ಮೀರತ್ ಪೊಲೀಸ್ ಮತ್ತು ದೆಹಲಿ ಪೊಲೀಸರ ಖಾತೆಗಳನ್ನು ಟ್ಯಾಗ್ ಮಾಡಿ, "ಈ ಕಾರ್ಯಕರ್ತರಿಗೆ ನಾಗರಿಕರ ಮೇಲೆ ಹಲ್ಲೆ ಮಾಡುವ ಹಕ್ಕನ್ನು ಯಾರು ಕೊಟ್ಟರು?" ಎಂದು ಅವರು ಪ್ರಶ್ನಿಸಿ ಕಮೆಂಟ್​ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net