ಸಹಾಯಕ್ಕಾಗಿ ಸಂಪರ್ಕಿಸಿದ ಮಹಿಳೆ ಮೇಲೆ ಅತ್ಯಾಚಾರ; ಗೃಹರಕ್ಷಕದಳದ ಅಧಿಕಾರಿ, ಕಾನ್ಸ್​ಟೇಬಲ್ ಬಂಧನ| Rape Case

Untitled design - 2025-09-26T140720.933
Published on

Rape Case: ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದ್ದ ಮಹಿಳೆಯನ್ನು ಗೃಹರಕ್ಷಕ ದಳದ ಅಧಿಕಾರಿ ಮತ್ತು ಕಾನ್ಸ್​ಟೇಬಲ್ ಅತ್ಯಾಚಾರ ಎಸಗಿದ ಆರೋಪ ಹಿನ್ನೆಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಶುಕ್ರವಾರ (ಸೆ. 26) ವರದಿಯಾಗಿದೆ.

ಚಿತ್ತೂರಿನ ಪುಂಗನೂರು ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಉಮಾಶಂಕರ್ ಮತ್ತು ಗೃಹರಕ್ಷಕ ದಳದ ಕಿರಣ್ ಕುಮಾರ್ ತನಗೆ ಮತ್ತು ಬರುವ ಪಾನೀಯ ನೀಡಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು 28 ವರ್ಷದ ಸಂತ್ರಸ್ತೆಯೊಬ್ಬರು ಆರೋಪಿಸಿದ್ದಾರೆ. ಈ ವಿಷಯವನ್ನು ಬಹಿರಂಗಪಡಿಸಿದರೆ  ಮೂವರು ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.

ಗೃಹರಕ್ಷಕ ದಳದ ಸಿಬ್ಬಂದಿ ಪದೇ ಪದೇ ಫೋನ್ ಕರೆಗಳ ಮೂಲಕ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರು ದಾಖಲಿಸಲು ಹಲವಾರು ಪೊಲೀಸ್ ಠಾಣೆಗಳನ್ನು ಸಂಪರ್ಕಿಸಿದರೂ, ಸುಮಾರು ಎರಡು ವಾರಗಳವರೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎನ್ನಲಾಗಿದ್ದು, ಅಂತಿಮವಾಗಿ ದೂರು ಇಬ್ಬರ ವಿರುದ್ಧ ದೂರು ದಾಖಲಾಗಿದೆ.

ಈ ಕುರಿತು ಪಲಮನೇರ್‌ನ ಉಪ ಪೊಲೀಸ್ ವರಿಷ್ಠಾಧಿಕಾರಿ ದೇಗಲ ಪ್ರಭಾಕರ್ ಮಾತನಾಡಿದ್ದು, ಮಾಧ್ಯಮದ ಮುಂದೆ ನ್ಯಾಯಕ್ಕಾಗಿ ಅವರು ಸಾರ್ವಜನಿಕವಾಗಿ ಮಾಡಿದ ಮನವಿಯ ನಂತರ, ಬಂಗಾರುಪಾಳ್ಯಂ ಪೊಲೀಸರು ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net