ರೀಲ್ಸ್​ ಮಾಡುವ ಯುವತಿಯರೇ ಎಚ್ಚರ! ಇಂಥ ತಪ್ಪು ನೀವು ಮಾಡಬೇಡಿ…

WhatsApp Image 2024-03-24 at 9.01.25 PM
Published on

ನವದೆಹಲಿ: ಇತ್ತೀಚಿನ ದಿನಗಳಲ್ಲಂತೂ ಯುವಜನತೆ ಮಾಡುವ ರೀಲ್ಸ್​ಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ ಹಾಗೂ ನೆಟ್ಟಿಗರ ಗಮನವನ್ನು ಸೆಳೆಯುತ್ತದೆ. ಅದರಲ್ಲೂ ಯುವತಿಯರೇ ಈ ರೀಲ್ಸ್​ ಗೀಳಿಗೆ ಹೆಚ್ಚಾಗಿ ಸಿಲುಕಿದ್ದು, ರೀಲ್ ವಿಡಿಯೋ ಮಾಡದಿದ್ದರೇ ದಿನವೇ ಅಪೂರ್ಣ ಎಂಬಂತೆ ಭಾವಿಸುತ್ತಾರೆ. ಸದ್ಯ ರೀಲ್​ ಟ್ರೆಂಡ್​ನಲ್ಲಿ ನಾನು ಇರಬೇಕು ಎಂದು ಈ ಮಹಿಳೆ ರಸ್ತೆಗಿಳಿದಿದ್ದೇ ತಡ, ಕಳ್ಳನಿಗೆ ಅದೃಷ್ಟದ ದಿನವಾಗಿದೆ.

ಹೌದು, ಮಹಿಳೆಯೊಬ್ಬರು ರೀಲ್ಸ್​ ಮಾಡಲೆಂದು ರಸ್ತೆಯ ಮಧ್ಯೆ ನಿಂತು ನಿಧಾನವಾಗಿ ನಡೆದುಕೊಂಡು ಬರುತ್ತಿದ್ದರು. ಇದನ್ನು ದೂರದಿಂದಲೇ ಗಮನಿಸಿದ ಬೈಕ್​ನಲ್ಲಿ ಬಂದ ಕಿರಾತಕ. ಮಹಿಳೆ ಮತ್ತು ಆಕೆಯ ಸ್ನೇಹಿತೆ ರೀಲ್ ಚಿತ್ರೀಕರಿಸುತ್ತಿದ್ದ ವೇಳೆ ಬೈಕ್​ನಲ್ಲಿ ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದು ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಘಟನೆ ಗಾಜಿಯಾಬಾದ್‌ನ ಇಂದಿರಾಪುರಂನಲ್ಲಿ ವರದಿಯಾಗಿದ್ದು, ಮಹಿಳೆ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಸರಗಳ್ಳತನದ ಸಂಪೂರ್ಣ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಆಕೆ ಮುಂದೆ ಬರುತ್ತಿದ್ದಂತೆ ಸರ ಎಗರಿಸಿದ ಕಿರಾತಕ, ಹೆಲ್ಮೆಟ್​ ಧರಿಸಿದ್ದರಿಂದ ಮುಖ ಸ್ಪಷ್ಟವಾಗಿ ಕಂಡುಬಂದಿಲ್ಲ. ಸಂತ್ರಸ್ತೆ ಸುಷ್ಮಾ ಪೊಲೀಸರಿಗೆ ದೂರು ನೀಡಿದ್ದು, ಇದೀಗ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net