ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಾ ಕಾರು ಚಲಾಯಿಸಿದ ಮಹಿಳೆ! ವಿಡಿಯೋ ವೈರಲ್ ಆದಾಗ,  ಬಿತ್ತು ದಂಡ.. Work From Car

Work From Car
Published on

ಬೆಂಗಳೂರು: ( Work From Car ) ನೀವು ಕಾರನ್ನು ಚಾಲನೆ ಮಾಡುವಾಗ, ನಿಮ್ಮ ಸಂಪೂರ್ಣ ಗಮನವು  ರಸ್ತೆ ಮತ್ತು ಹಾದುಹೋಗುವ ವಾಹನಗಳ ಮೇಲೆ ಇರಬೇಕು. ಆದರೆ ಇ ಲ್ಲೊಬ್ಬಳು ಮಹಿಳೆ  ಕಾತು ಚಲಾಯಿಸುತ್ತಾ ಲ್ಯಾಪ್​ಟಾಪ್​ನಲ್ಲಿ ಕೆಲಸ ಮಾಡಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ  ಬೆಂಗಳೂರು  ಪೊಲೀಸರು ಈಕೆಗೆ ಭಾರೀ ಮೊತ್ತದ ದಂಡವನ್ನು ವಿಧಿಸಿದ್ಧಾರೆ.

ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಮಹಿಳೆಯೊಬ್ಬರು ಕಾರು ಚಾಲನೆ ಮಾಡುತ್ತಿರುವಾಗ ಆಕೆಯ ಲ್ಯಾಪ್‌ಟಾಪ್ ಆಕೆಯ ಮಡಿಲಲ್ಲಿ ಇಟ್ಟುಕೊಂಡಿರುವುದು ಕಂಡುಬರುತ್ತದೆ. ಇದರರ್ಥ ಅವಳು ಕಾರನ್ನು ಓಡಿಸುವುದರ ಜೊತೆಗೆ ತನ್ನ ಕಚೇರಿ ಕೆಲಸವನ್ನೂ ನೋಡಿಕೊಳ್ಳುತ್ತಿದ್ದಾಳೆ. ಹೀಗೆ ಮಾಡುವುದು ನಿಮ್ಮ ಸ್ವಂತ ಜೀವನ ಮತ್ತು ಇತರರ ಜೀವನಕ್ಕೆ ಅಪಾಯಕಾರಿ. ಯಾರೋ ಇದರ ವಿಡಿಯೋ ಮಾಡಿದ್ದಾರೆ.

ಸಂಚಾರ ಪೊಲೀಸರು ಆಕೆಗೆ ದಂಡ ವಿಧಿಸಿದ್ದಾರೆ. ವೈರಲ್ ಆಗಿರುವ ವಿಡಿಯೋ ಮತ್ತು ಚಲನ್ ನಂತರದ ಫೋಟೋವನ್ನು ಬೆಂಗಳೂರಿನ ಟ್ರಾಫಿಕ್ ನಾರ್ತ್ ಡಿಸಿಪಿ ಅವರ ಖಾತೆಯಿಂದ ಹಂಚಿಕೊಳ್ಳಲಾಗಿದೆ.

ಈ ವಿಡಿಯೋ ಹಂಚಿಕೊಂಡ ಪೊಲೀಸ್, ವರ್ಕ್ ಪ್ರಮ್ ಹೋಮ್ ಸರಿ ಆದರೆ ಡ್ರೈವಿಂಗ್ ಮಾಡುತ್ತಾ ವರ್ಕ್ ಫ್ರಮ್ ಕಾರು ನಿಯಮ ಉಲ್ಲಂಘನೆ ಎಂದು ಪೊಲೀಸ್ ಈ ವಿಡಿಯೋ ಹಾಗೂ ಫೋಟೋ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಭಾರಿ ಕಮೆಂಟ್ ವ್ಯಕ್ತವಾಗಿದೆ. ಈ ರೀತಿ ಸ್ಟಂಟ್ ಮಾಡುವವರ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸಲು ಆಗ್ರಹಿಸಿದ್ದಾರೆ.

ಈ  ವಿಡಿಯೋ ಮತ್ತು ಫೋಟೋ ನೋಡಿದ ನಂತರ ಅನೇಕ ಜನರು ಕಾಮೆಂಟ್ ಮಾಡಿದ್ದಾರೆ.  ಚಾಲನಾ ಪರವಾನಗಿಯನ್ನು ರದ್ದುಗೊಳಿಸಬೇಕು.  ಇದೆಲ್ಲವೂ ರೀಲ್‌ಗಳನ್ನು ಮಾಡಲು ಮಾಡಲಾಗುತ್ತದೆ. ಮೂರನೇ   ಭಯಾನಕ ಭಾರತೀಯ ಕೆಲಸದ ಸಂಸ್ಕೃತಿ ಎಂದು ಕಾಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net